ಇಂಜಿನಿಯರಿಂಗ್ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ…FIR ದಾಖಲು…
- TV10 Kannada Exclusive
- November 16, 2025
- No Comment
- 34
ಇಂಜಿನಿಯರಿಂಗ್ ವಿಧ್ಯಾರ್ಥಿನಿಗೆ ಲೈಂಗಿಕ ಕಿರುಕುಳ…FIR ದಾಖಲು…
ಮೈಸೂರು,ನ16,Tv10 ಕನ್ನಡ
ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ ಹಿನ್ನಲೆ
ಉಪನ್ಯಾಸಕನ ವಿರುದ್ದ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ದೂರು ನೀಡಿದ್ದಾರೆ.ಭರತ್ ಭಾರ್ಗವ ಎಂಬಾತನ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
BNS ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿನಿತ್ಯ ಉಪನ್ಯಾಸಕನಿಂದ ಕಿರುಕುಳ ಆರೋಪ ಮಾಡಲಾಗಿದೆ.
ಮಾರ್ಕ್ಸ್ ಹೆಚ್ಚು ನೀಡುತ್ತೇನೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ನೀಡಿ
ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಅಂತಾ ಕರೆಯುತ್ತಿದ್ದ.ಈ ಬಗ್ಗೆ ಮಹಿಳಾ ಉಪನ್ಯಾಸಕರಿಗೆ ವಿಧ್ಯಾರ್ಥಿನಿ ದೂರು ನೀಡಿದ್ದರು.ಈ ಹಿನ್ನಲೆ ಭರತ್ ಭಾರ್ಗವ್ ಕರೆ ಮಾಡಿ ಬೆದರಿಕೆ ಹಾಕಿದ್ದ.
ವಿದ್ಯಾರ್ಥಿನಿ ಖಾಸಗಿ ಅಂಗಾಂಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ. ಭರತ್ ಭಾರ್ಗವ್
ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಉಪನ್ಯಾಸಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ…