ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್ ದೃವನಾರಾಯಣ್ ಸಾಂತ್ವನ…
- TV10 Kannada Exclusive
- November 18, 2025
- No Comment
- 12

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್ ದೃವನಾರಾಯಣ್ ಸಾಂತ್ವನ…
ನಂಜನಗೂಡು,ನ18,Tv10 ಕನ್ನಡ
ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಹುಲ್ಲಹಳ್ಳಿ ಪೊಲೀಸ್ ಠಾಣಾ ಸಮೀಪ ನಡೆದಿದೆ.ಹುಣಸನಾಳು ಗ್ರಾಮದ ಲಿಂಗರಾಜು(35) ಮೃತ ದುರ್ದೈವಿ.ಸಂತೋಷ್ ಎಂಬುವರಿಗೆ ಸೇರಿದ ತೆಂಗಿನ ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ದುರ್ಘಟನೆ ನಡೆದಿದೆ.ಮಂಜು ಎಂಬಾತ ಗುತ್ತಿಗೆ ಪಡೆದಿದ್ದು 5 ಕಾರ್ಮಿಕರನ್ನ ಕಾಯಿ ಕೀಳಲು ಕರೆತಂದಿದ್ದರು.ಇಂದು ಬೆಳಿಗ್ಗೆ ಮರ ಹತ್ತಿದ್ದ ವೇಳೆ ಲಿಂಗರಾಜು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.ಸ್ಥಳಕ್ಕೆ ಶಾಸಕ ದರ್ಶನ್ ಧೃವನಾರಾಯಣ್ ಭೇಟಿ ನೀಡಿ 20 ಸಾವಿರ ಪರಿಹಾರ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ…