ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…ಮಹಿಳೆ ವಿರುದ್ದ FIR…
- TV10 Kannada Exclusive
- November 19, 2025
- No Comment
- 545
ಮೈಸೂರು,ನ19,Tv10 ಕನ್ನಡ
ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಠಾಣೆಯಲ್ಲೇ ಮಹಿಳೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಹಲ್ಲೆ ನಡೆಸಿದ ಮಹಿಳೆ ವಿರುದ್ದ ಮಹಿಳಾ ಪೇದೆ FIR ದಾಖಲಿಸಿದ್ದಾರೆ. ಸರಸ್ವತಿ.ಜಿ.ವಿ.ರವರೇ ಹಲ್ಲೆಗೊಳಗಾದ ಮಹಿಳಾ ಪೇದೆ.ಲತಾ ಎಂಬುವರೇ ಠಾಣೆಯಲ್ಲೇ ಹಲ್ಲೆ ನಡೆಸಿದ ಮಹಿಳೆ.
ರಂಜಿತಾ ಎಂಬುವರ ಜೊತೆ ಲತಾ ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಇಬ್ಬರೂ ಠಾಣೆಗೆ ಬಂದಿದ್ದಾರೆ.ಈ ಸಂಬಂಧ ಎಸ್.ಹೆಚ್.ಓ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ವಾಮಿ ರವರು ವಿಚಾರಣೆ ಮಾಡಿದ್ದಾರೆ.ನಂತರ ಠಾಣೆಯಿಂದ ಹೊರ ಆವರಣಕ್ಕೆ ಬಂದ ಇಬ್ಬರು ಮಹಿಳೆಯರು ಗಲಾಟೆ ಮಾಡಿ ಕಿರುಚಾಡಿದ್ದಾರೆ.ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸರಸ್ವತಿ ರವರು ಗಲಾಟೆ ಮಾಡದಂತೆ ಮನವಿ ಮಾಡಿದ್ದಾರೆ.ಲತಾ ರವರು ಸರಸ್ವತಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ.ನಂತರ ನೇರವಾಗಿ ಇನ್ಸ್ಪೆಕ್ಟರ್ ಚೇಂಬರ್ ಗೆ ಪ್ರವೇಶಿಸಿ ಕುಳಿತಿದ್ದಾರೆ.ಇನ್ಸ್ಪೆಕ್ಟರ್ ಇಲ್ಲದ ಕಾರಣ ಪಿಎಸ್ಸೈ ಚೇಂಬರ್ ನಲ್ಲಿ ಕುಳಿತುಕೊಳ್ಳುವಂತೆ ಸರಸ್ವತಿ ಅವರು ಹೇಳಿದಾಗ ಸಿಬ್ಬಂದಿಗಳ ಮುಂದೆ ಏಕಾ ಏಕಿ ಮುಖ,ಕೈ,ಹಾಗೂ ಕಣ್ಣಿನ ಮೇಲೆ ಹಲ್ಲೆ ನಡೆಸಿ ದುರ್ವರ್ತನೆ ಪ್ರದರ್ಶಿಸಿದ್ದಾರೆ.ಠಾಣೆಯಲ್ಲೇ ಒಬ್ಬ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದರೂ ಮಹಿಳೆಯನ್ನ ಅರೆಸ್ಟ್ ಮಾಡದೆ ಕೇವಲ ಪ್ರಕರಣ ದಾಖಲಿಸಿ ಕೈ ತೊಳೆದುಕೊಳ್ಳಲಾಗಿದೆ.ಠಾಣೆಯಲ್ಲಿ ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಿದ್ರೆ ಸಾರ್ವಜನಿಕರ ಪಾಡೇನು ಎಂಬ ಪ್ರಶ್ನೆ ಉದ್ಭವವಾಗಿದೆ…