ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ…
- TemplesTV10 Kannada Exclusive
- November 19, 2025
- No Comment
- 13


ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ…

ಶಬರಿಮಲೆ,ನ19,Tv10 ಕನ್ನಡ
ಶಬರಿಮಲೆಯಲ್ಲಿ ಮಂಡಲಪೂಜೆ ಆರಂಭವಾದ ಹಿನ್ನಲೆ ಭಕ್ತಸಾಗರವೇ ಹರಿದುಬಂದಿದೆ.ನವೆಂಬರ್ 17 ರಿಂದ ಮಂಡಲಪೂಜೆ ಆರಂಭವಾಗಿದೆ.ನಾಡಿನ ವಿವಿದ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ.ಅಯ್ಯಪ್ಪನ ದರುಶನಕ್ಕಾಗಿ ಇರುಮುಡಿ ಹೊತ್ತು ಗಂಟೆಗಳ ಕಾಲ ಸರದಿಯಲ್ಲಿ ನಿಂತಿದ್ದಾರೆ.ಭಕ್ತರಸಾಗರವನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ
ಮಾಡುತ್ತಿದ್ದಾರೆ.ಅವ್ಯವಸ್ಥೆ ಭಕ್ತರನ್ನ ಕಾಡಿದೆ.ಪೊಲೀಸ್ ಸಿಬ್ಬಂದಿಗಳ ಕೊರತೆಯೂ ಎದ್ದು ಕಾಣುತ್ತಿದೆ.ಇರುವ ಒಂದೇ ಹೋಟೆಲ್ ಗೆ ಫುಲ್ ಡಿಮ್ಯಾಂಡ್.ಊಟ ವಸತಿಗೂ ಪರದಾಟವಾಗಿದೆ.45 ದಿನಗಳ ಕಾಲ ನಡೆಯುವ ಮಂಡಲಪೂಜೆಗೆ ಭಕ್ತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.ಕೇರಳಾ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕಿದೆ…