ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣ…ವಹಿವಾಟಿಗೆ ಬ್ರೇಕ್…ವಲಯ ಆಯುಕ್ತರಿಗೆ MAD ಆಯುಕ್ತ ಸೂಚನೆ…

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ ಪ್ರಕರಣ…ವಹಿವಾಟಿಗೆ ಬ್ರೇಕ್…ವಲಯ ಆಯುಕ್ತರಿಗೆ MAD ಆಯುಕ್ತ ಸೂಚನೆ…

ಮೈಸೂರು,ನ20,Tv10 ಕನ್ನಡ

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸದಂತೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ವಲಯ ಕಚೇರಿ 4 ರ ಆಯುಕ್ತರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.ಪ್ರಕರಣಕ್ಕೆ ಸಂಬಂಧಪಟ್ಟಂತೆ ಓರ್ವ ಅಧಿಕಾರಿ ಹಾಗೂ ಓರ್ವ ನೌಕರ ಅಮಾನತಾಗಿದ್ದಾರೆ.ಸಸ್ಪೆಂಡ್ ಆದವರು ತಡೆಯಾಜ್ಞೆ ತಂದಿದ್ದಾರೆ.ಆದರೆ ಪ್ರಕರಣ ಸಂಬಂಧ ಇಲಾಖೆ ತನಿಖೆ ನಡೆಯುತ್ತಿದೆ.ತನಿಖೆ ಅಂತಿಮವಾಗುವವರೆಗೆ ಆಸ್ತಿಗೆ ಸಂಬಂಧ ಪಟ್ಟಂತೆ ಯಾವುದೇ ವಹಿವಾಟು ನಡೆಸದಂತೆ ಸೂಚನೆ ನೀಡಿದ್ದಾರೆ.

ಗೋಕುಲಂ 3 ನೇ ಹಂತ ನಿವೇಶನ ಸಂಖ್ಯೆ 867 ಲಿಲಿಯನ್ ಶಾರದಾ ಜೋಸೆಫ್ ಎಂಬುವರಿಗೆ ಮುಡಾದಿಂದ 2-1-1982 ರಲ್ಲಿ ಮಂಜೂರಾಗಿದೆ.3-12-1982 ರಲ್ಲಿ ಸ್ವಾಧೀನ ಪತ್ರ ನೀಡಲಾಗಿದೆ.3-09-1983 ರಲ್ಲಿ ಲಿಲಿಯನ್ ಶಾರದಾ ಜೋಸೆಫ್ ಮೃತಪಟ್ಟಿದ್ದಾರೆ.22-05-2008 ರಲ್ಲಿ ಪೌತಿದಾರರ ಕುಟುಂಬ ಜೀವಿತ ಪತ್ರದಂತೆ ಹಾಗೂ ನೊಂದಾಯಿತ ವಿಭಾಗ ಪತ್ರದಂತೆ ನವಿಲ್ ಮಾರ್ಕಸ್ ಜೋಸೆಫ್ ಎಂಬುವರಿಗೆ ಸೇರಿದೆ ಎಂದು ದಾಖಲೆಗಳನ್ನ ಸೃಷ್ಟಿಸಿ 06-04-2024 ರಂದು ವರ್ಗಾವಣೆ ಮಾಡಿ ಇದಕ್ಕೆ ಹೊಂದಿಕೊಂಡಂತಿರುವ ತುಂಡು ಜಾಗವನ್ನೂ ಸೇರಿ ಕ್ರಯಪತ್ರ ಮಾಡಿಕೊಡಲಾಗಿದೆ.ಸದರಿ ಕ್ರಯಪತ್ರ ನಿಯಮಬಾಹಿರವಾಗಿದೆ ಎಂದು ಆರೋಪಿಸಿ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಸರ್ಕಾರಕ್ಕೆ ದೂರು ನೀಡಿದ್ದರು.ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲಿಸಿದ ಅಧಿಕಾರಿಗಳು ಅಕ್ರಮ ಬೆಳಕಿಗೆ ಬಂದ ಹಿನ್ನಲೆ
MDA ವಿಶೇಷ ತಹಸೀಲ್ದಾರ್ ರಾಜಶೇಖರ್ ಹಾಗೂ ವ್ಯವಸ್ಥಾಪಕ ಸೋಮುಸುಂದ್ರ ಇಬ್ಬರನ್ನ ಸಸ್ಪೆಂಡ್ ಮಾಡಿತ್ತು.ಅಮಾನತನ್ನ ಪ್ರಶ್ನಿಸಿ ಸದರಿಯವರು ತಡೆಯಾಜ್ಞೆ ತಂದಿದ್ದಾರೆ.ಆದರೆ ಇನ್ನೂ ಇಲಾಖಾ ತೆನಿಖೆ ನಡೆಯುತ್ತಿದೆ.ತೆನಿಖೆ ಪೂರ್ಣವಾಗುವವರೆಗೆ ಸದರಿ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆಸಬಾರದೆಂದು ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾದ ಕೆ.ಆರ್.ರಕ್ಷಿತ್ ರವರು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಆಯುಕ್ತರಿಗೆ ಪತ್ರ ಬರೆದಿದ್ದಾರೆ.ಬಿ.ಎನ್.ನಾಗೇಂದ್ರ ರವರು ನೀಡಿದ ದೂರು ಗಂಭೀರ ಪರಿಣಾಮ ಬೀರಿದೆ…

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *