CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು…
- TV10 Kannada Exclusive
- November 20, 2025
- No Comment
- 194
CAR ಮುಖ್ಯಪೇದೆ ಚೆನ್ನಕೇಶವ ಸಸ್ಪೆಂಡ್…ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ ವಂಚನೆ ಹಿನ್ನಲೆ ಅಮಾನತು…
ಮೈಸೂರು,ನ20,Tv10 ಕನ್ನಡ
ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ 7.45 ಲಕ್ಷ ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಗರ ಮೀಸಲು ಪಡೆ (CAR) ಮುಖ್ಯಪೇದೆ ಚೆನ್ನಕೇಶವ ರವರನ್ನ ಸಸ್ಪೆಂಡ್ ಮಾಡಲಾಗಿದೆ.ವಂಚನೆಗೆ ಒಳಗಾದ ವ್ಯಕ್ತಿ ಚೆನ್ನಕೇಶವ ಹಾಗೂ ಈತನ ಪತ್ನಿ ಸೇರಿದಂತೆ ಹಲವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ಈ ಹಿನ್ನಲೆ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.
ಅಕ್ಷರ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸುನಿಲ್ ಎಂಬುವರಿಗೆ ವಂಚಿಸಿದ ಆರೋಪ ಚೆನ್ನಕೇಶವ ಮೇಲಿದೆ.ಸುನಿಲ್ ರವರು ದಾಖಲಿಸಿದ ಪ್ರಕರಣದ ಹಿನ್ನಲೆ ಇಲಾಖೆ ಕ್ರಮ ಕೈಗೊಂಡಿದೆ.
ಚೆನ್ನಕೇಶವ ಹಾಗೂ ಇವರ ಪತ್ನಿ ಕಾಲೇಜ್ ಒಂದನ್ನ ನಡೆಸುತ್ತಿದ್ದರು.ಜೊತೆ ಟ್ರಸ್ಟ್ ಸಹ ಇತ್ತು.ಕಾಲೇಜಿಗೆ ಉಪಪ್ರಾಂಶುಪಾಲರಾಗಿ ಹಾಗೂ ಟ್ರಸ್ಟಿಯಾಗಿ ಸೇರಿಸಿಕೊಳ್ಳುವುದಾಗಿ ಸುನಿಲ್ ರವರಿಗೆ ಆಮಿಷ 10 ಲಕ್ಷ ಪಡೆದಿದ್ದರು.ಹಣ ಪಡೆದ ನಂತರ ಸುನಿಲ್ ರವರಿಗೆ ಯಾವುದೇ ಅಧಿಕಾರ ನೀಡದೆ ಹಣವನ್ನೂ ಹಿಂದಿರುಗಿಸಿಲ್ಲ.ತೀವ್ರ ಒತ್ತಡ ಹೇರಿದಾಗ 2.55 ಲಕ್ಷ ಹಿಂದಿರುಗಿಸಿ 7.45 ಲಕ್ಷ ವಂಚಿಸಿದ್ದಾರೆ.ಈ ಸಂಬಂಧ ಸುನಿಲ್ ರವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದರು.ಈ ಹಿನ್ನಲೆ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಚೆನ್ನಕೇಶವ ರವರನ್ನ ಅಮಾನತಿನಲ್ಲಿ ಇಡಲಾಗಿದೆ…