ಸೈಬರ್ ಅಪರಾಧ ತಡೆ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಜಾಗೃತಿ…
- TV10 Kannada Exclusive
- November 21, 2025
- No Comment
- 56

ಸೈಬರ್ ಅಪರಾಧ ತಡೆ…ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಜಾಗೃತಿ…

ಮೈಸೂರು,ನ21,Tv10 ಕನ್ನಡ
ಸೈಬರ್ ಅಪರಾಧ ತಡೆ ಬಗ್ಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ನಿಂದ ಮೈಸೂರಿನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು.ಮೈಸೂರು ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆ ಮುಖ್ಯಪೇದೆ ಎನ್.ಮಹೇಶ್ ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತ್ತಿವೆ. ಸೈಬರ್ ಅಪರಾಧಿಗಳು ಅಮಾಯಕ ಜನರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲು ಹೊಂಚುಹಾಕಿ ಕುಳಿತಿರುತ್ತಾರೆ. ಅಪರಾಧಗಳ ಕುರಿತು ಆತಂಕಗೊಳ್ಳುವ ಬದಲು ಪಾಸ್‍ವರ್ಡ್ ಭದ್ರತೆ ಕುರಿತು ಸದಾ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.ಬ್ಯಾಂಕ್‍ಗಳ ಹೆಸರಿನಲ್ಲಿ ಒಟಿಪಿ ಮಾಹಿತಿ ಪಡೆದುಕೊಳ್ಳುವ ಮೂಲಕ ಬ್ಯಾಂಕ್ ಖಾತೆಗಳಲ್ಲಿನ ಸೈಬರ್ ಅಪರಾಧಿಗಳು ಹಣ ದೋಚುತ್ತಾರೆ. ಅಪರಿಚಿತ ವ್ಯಕ್ತಿಗಳು ಕರೆಮಾಡಿದರೆ ಮಾಹಿತಿ ಹಂಚಿಕೊಳ್ಳಬೇಡಿ. ಬ್ಯಾಂಕ್ ಸಿಬ್ಬಂದಿ ಯಾವುದೇ ಕಾರಣಕ್ಕೂ ಮೊಬೈಲ್ ಕರೆಮಾಡಿ ಮಾಹಿತಿ ಕೇಳುವುದಿಲ್ಲ. ಇದು ಅಪರಾಧಿಗಳ ಕೃತ್ಯವಾಗಿರುತ್ತದೆ ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ನ ಉಪಾಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್, ರಾಜ್ಯ ವಿದ್ಯಾ ವರ್ಗದ ಸಂಚಲಕರದ ಡಾ. ಜಿ ವಿ ರವಿಶಂಕರ್,
ಶಿಕ್ಷಕರಾದ ಧನುಷ್, ಶ್ವೇತ ಹಾಗೂ ಇನ್ನಿತರರು ಹಾಜರಿದ್ದರು…