ಫ್ರಾಡ್ ಮೆಸೇಜ್ ಓಪನ್ ಮಾಡಿದ 21 ನಿಮಿಷದಲ್ಲಿ 1.98 ಲಕ್ಷ ಗಾಯಬ್…
- TV10 Kannada Exclusive
- November 25, 2025
- No Comment
- 21
ಮೈಸೂರು,ನ25,Tv10 ಕನ್ನಡ
ಫ್ರಾಡ್ ಮೆಸೇಜ್ ಓಪನ್ ಮಾಡಿ ಕೇವಲ 21 ನಿಮಿಷದಲ್ಲಿ ಖದೀಮರು ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ಲಪಟಾಯಿಸಿದ ಪ್ರಕರಣ ಬೆಳಕಿಗೆ ಬಂದಿದೆ.ವಂಚನೆಗೆ ಒಳಗಾದ ಪ್ಯಾಕರ್ಸ್ ಅಂಡ್ ಮೂವರ್ಸ್ ಮಾಲೀಕರಾದ ಚಂದ್ರಶೇಖರ್ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಖಾಸಗಿ ಬ್ಯಾಂಕ್ ಒಂದರಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವ ಚಂದ್ರಶೇಖರ್ ರವರಿಗೆ ಕರೆ ಬಂದಿದೆ.ಬ್ಯಾಂಕ್ ನಿಂದ ಮಾತನಾಡಿದಂತೆ ವಂಚಕರು ಮಾಹಿತಿ ಪಡೆಯಲು ಯತ್ನಿಸಿದ್ದಾರೆ.ಇದೊಂದು ಫ್ರಾಡ್ ಕಾಲ್ ಎಂದು ನಿರ್ಧರಿಸಿದ ಚಂದ್ರಶೇಖರ್ ಕರೆ ರಿಸೀವ್ ಮಾಡುವುದನ್ನ ಸ್ಥಗಿತಗೊಳಿಸಿದ್ದಾರೆ.ನಂತರ 26 ಸಾವಿರ ಕ್ರೆಡಿಟ್ ಆಗಿರುವುದಾಗಿ ಮೆಸೇಜ್ ಬಂದಿದೆ.ಮೆಸೇಜ್ ಓಪನ್ ಮಾಡಿದ ಕೇವಲ 21 ನಿಮಿಷದಲ್ಲಿ ವಂಚಕರು ಹಂತಹಂತವಾಗಿ 1.98,880/ ರೂ ಗಳನ್ನ ಬಳಸಿದ್ದಾರೆ.ಕೆಲವೇ ನಿಮಿಷಗಳಲ್ಲಿ ಹಲವು ಓಟಿಪಿ ಗಳು ಬಂದ ಹಿನ್ನಲೆ ಕೂಡಲೇ ತಮ್ಮ ಖಾತೆ ಬ್ಲಾಕ್ ಮಾಡಿಸಿ 1930 ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.ಹಣ ವಂಚಿಸಿದ ಆಗುಂತಕ ವ್ಯಕ್ತಿ ವಿರುದ್ದ ಚಂದ್ರಶೇಖರ್ ಹೆಬ್ಬಾಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…