ಕೇಂದ್ರ ಕಾರಾಗೃಹ ಮೇಲೆ ಪೊಲೀಸರ ಧಿಢೀರ್ ದಾಳಿ…ಡಿಸಿಪಿ ಬಿಂದುಮಣಿ ನೇತೃತ್ವದಲ್ಲಿ ಪರಿಶೀಲನೆ…
- TV10 Kannada Exclusive
- November 25, 2025
- No Comment
- 60
ಕೇಂದ್ರ ಕಾರಾಗೃಹ ಮೇಲೆ ಪೊಲೀಸರ ಧಿಢೀರ್ ದಾಳಿ…ಡಿಸಿಪಿ ಬಿಂದುಮಣಿ ನೇತೃತ್ವದಲ್ಲಿ ಪರಿಶೀಲನೆ…
ಮೈಸೂರು,ನ25,Tv10 ಕನ್ನಡ
ಬೆಂಗಳೂರು ಜೈಲಿನಲ್ಲಿ ಮೋಜು ಮಸ್ತಿ ವಿಚಾರ ವೈರಲ್ ಆದ ಬೆನ್ನ ಹಿಂದೆಯೇ ಮೈಸೂರು ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ.ಮೈಸೂರು ಕಾರಾಗೃಹಕ್ಕೆ ಧಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿಂದುಮಣಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.ಬಿಂದುಮಣಿ ರವರಿಗೆ ಎಸಿಪಿಗಳು ಹಾಗೂ ವಿವಿಧ ಠಾಣೆಯ ನಿರೀಕ್ಷಕರುಗಳು ಸಾಥ್ ನೀಡಿದ್ದಾರೆ.ಬೆಳ್ಳಂಬೆಳಗ್ಗೆ ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದೆಡೆ ಗೃಹಸಚಿವ ಪರಮೇಶ್ವರ್ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದರೆ ಮತ್ತೊಂದೆಡೆ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿ ಕುತೂಹಲ ಮೂಡಿಸಿದ್ದಾರೆ.ನಿರಂತರವಾಗಿ ಸುಮಾರು 5 ಗಂಟೆಗಳ ಕಾಲ ಪರಿಶೀಲನೆ ನಡೆದಿದೆ…