ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್
- TV10 Kannada Exclusive
- November 26, 2025
- No Comment
- 14
ಭಾರತದ ಸಂವಿಧಾನ ಪ್ರಪಂಚದಲ್ಲಿ ಬಲಿಷ್ಠ ಸಂವಿಧಾನ- ಸಿ.ಆರ್ ದಿನೇಶ್ ಭಾರತದ ಸಂವಿಧಾನವು ಪ್ರಪಂಚದಲ್ಲಿಯೇ ಬಲಿಷ್ಠ ಸಂವಿದಾನವಾಗಿದೆ. ಭಾರತದ ಶಕ್ತಿ ಅದರ ಸಂವಿಧಾನ. ಸಂವಿಧಾನವೇ ದೇಶದ ಆತ್ಮ ಮತ್ತು ಪ್ರಜಾಪ್ರಭುತ್ವದ ಮಾರ್ಗದರ್ಶಕ . ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿ, ಯುವ ಜನತೆ ಸಂವಿಧಾನ ಪಾಲನೆ ಹಾಗೂ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಪ್ರಾಂಶುಪಾಲರಾದ ಸಿ.ಆರ್ .ದಿನೇಶ್ ಅವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹೇಳಿದರು ಆಂಗ್ಲ ಭಾಷೆ ಉಪನ್ಯಾಸಕ ರಂಗಸ್ವಾಮಿ ರವರು ಮಾತನಾಡಿ ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಸಂವಿದಾನದ ಪೀಠಿಕೆಯನ್ನು ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಓದಿಸಿ, ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಬಾಂಧವ್ಯಗಳ ಮಹತ್ವವನ್ನು ರಾಜ್ಯಶಾಸ್ತ್ರ ಉಪನ್ಯಾಸಕ ಹೆಚ್ ಕೆ. ಸ್ವಾಮಿಗೌಡ ರವರು ವಿವರಿಸಿದರು.
ಕಾರ್ಯಕ್ರಮವು ದೇಶಾಭಿಮಾನ, ಮಾನವೀಯತೆ ಮತ್ತು ಸಂವಿಧಾನ ಪ್ರಜ್ಞೆಯನ್ನು ಬಲಪಡಿಸುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ ,ನಾಗರಾಜ್, ಹೆಚ್ಚ್ .ಕೆ.ಪ್ರಕಾಶ್ ,ಡಾ.ಕೆ ಮಾಲತಿ, ಡಾ. ಸುಮಾ, ವತ್ಸಲ ,ಹರೀಶ್ , ನಾಗರಾಜರೆಡ್ಡಿ , ದಿನೇಶ್ ,ಸುಮಿತ್ರ.ಅಂಬಿಕಾ,ಪದ್ಮಾವತಿ, ಭವ್ಯ , ಅದಿಲ್ ಹುಸೇನ್ ,ಮೀನಾ ಉಪಸ್ಥಿತರಿದ್ದರು.