ಮೈಸೂರು ಅಭಿವೃದ್ದಿ ಪ್ರಾಧಿಕಾರ ಅಧೀಕ್ಷಕ ಅಭಿಯಂತರ ಮುರಳೀಧರ್ ಎತ್ತಂಗಡಿ…ಮಾತೃಇಲಾಖೆಗೆ ವರ್ಗಾವಣೆ ಆದೇಶ…
- TV10 Kannada Exclusive
- November 27, 2025
- No Comment
- 99

ಮೈಸೂರು ಅಭಿವೃದ್ದಿ ಪ್ರಾಧಿಕಾರ ಅಧೀಕ್ಷಕ ಅಭಿಯಂತರ ಮುರಳೀಧರ್ ಎತ್ತಂಗಡಿ…ಮಾತೃಇಲಾಖೆಗೆ ವರ್ಗಾವಣೆ ಆದೇಶ…





ಮೈಸೂರು,ನ27,Tv10 ಕನ್ನಡ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಅಧೀಕ್ಷಕರಾಗಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಮುರಳಿಧರ್ ಎಂ.ರವರನ್ನ ಅವರ ಮಾತೃ ಇಲಾಖೆ ಜಲಸಂಪನ್ಮೂಲ ಇಲಾಖೆಗೆ ಹಿಂದುರುಗುವಂತೆ ಆದೇಶ ಹೊರಡಿಸಲಾಗಿದೆ.ಅಭಿವೃದ್ದಿ ಇಲಾಖೆ ಮತ್ತು ನಗರ ಯೋಜನೆ ಸೇವೆ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಲತಾ ಕೆ ರವರು ನವೆಂಬರ್ 6 ರಂದು ಆದೇಶ ಹೊರಡಿಸಿದ್ದಾರೆ.ಈ ಹಿಂದೆ ಲೋಕೋಪಯೋಗಿ ಇಲಾಖೆ ಚಿಕ್ಕಬಳ್ಳಾಪುರ ಇಲ್ಲಿ ಕಾರ್ಯಪಾಲಕ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುವ ವೇಳೆ ಲೋಕಾಯುಕ್ತ ದಾಳಿ ನಡೆಸಿದಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು.ಇವರ ವಿರುದ್ದ ಲೋಕಾಯುಕ್ತ ಉಪ ಆಯುಕ್ತರು ದೋಷಾರೋಪಣೆ ಪಟ್ಟಿ ಸಹ ಸಲ್ಲಿಸಿದ್ದರು.ಇಲಾಖಾ ವಿಚಾರಣೆಯೂ ನಡೆಯುತ್ತಿತ್ತು.ಹೀಗಿದ್ದೂ ಇವರನ್ನ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನಿಯೋಜನೆ ಮಾಡಿದ್ದರು.ಇದೀಗ ಮುರಳೀಧರ್ ರವರನ್ನ ಮಾತೃ ಇಲಾಖೆ ಮತ್ತೆ ಹಿಂದಿರುಗುವಂತೆ ಆದೇಶ ಹೊರಡಿಸಲಾಗಿದೆ…