ಫೈನಾನ್ಷಿಯರ್ ಅಪಹರಣ…ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್…ನಾಲ್ವರು ಅಪಹರಣಕಾರರ ಬಂಧನ…ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಜಯನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಫೈನಾನ್ಷಿಯರ್ ರಕ್ಷಣೆ…
- CrimeTV10 Kannada Exclusive
- December 7, 2025
- No Comment
- 308

ಫೈನಾನ್ಷಿಯರ್ ಅಪಹರಣ…ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್…ನಾಲ್ವರು ಅಪಹರಣಕಾರರ ಬಂಧನ…ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ವಿಜಯನಗರ ಠಾಣೆ ಪೊಲೀಸರ ಯಶಸ್ವಿ ಕಾರ್ಯಾಚರಣೆ…ಫೈನಾನ್ಷಿಯರ್ ರಕ್ಷಣೆ…
ಮೈಸೂರು,ಡಿ7,Tv10 ಕನ್ನಡ
ಮೈಸೂರು ವಿಜಯನಗರ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಲ್ಲಿ ಅಪಹರಣವಾಗಿದ್ದ ಫೈನಾನ್ಷಿಯರ್ ರಕ್ಷಿಸಲಾಗಿದೆ.ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ನಾಲ್ವರು ಆರೋಪಿಗಳನ್ನ ಸೆದೆಬಡಿದಿದ್ದಾರೆ.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ವಿಜಯನಗರ ನಿವಾಸಿ ಲೋಕೇಶ್ ಆರೋಪಿಗಳಿಂದ ಬಚಾವ್ ಆದ ಫೈನಾನ್ಷಿಯರ್.ಸಂತೋಷ್ ಹೆಚ್ ಎಂ,ಅಭಿಷೇಕ್ ಹೆಚ್ ಎಸ್, ಪ್ರಜ್ವಲ್ ಆರ್ ಹಾಗೂ ದರ್ಶನ್ ಬಿ.ಎನ್ ಬಂಧಿತ ಅಪಹರಣಕಾರರು.
ದಿನಾಂಕ 6/12/2025 ರಾತ್ರಿ 8.15 ಗಂಟೆ ಸಮಯದಲ್ಲಿ ವಿಜಯನಗರ 3ನೇ ಹಂತ ಹೆರಿಟೇಜ್ ಕ್ಲಬ್ ನಿಂದ ಮನೆಗೆ ಹೋಗಲು ಹೊರಗೆ ಬಂದ ಲೋಕೇಶ್ ಅವರ ಮೇಲೆ ಅಟ್ಯಾಕ್ ಮಾಡಿದ ನಾಲ್ಕು ಜನರ ಗುಂಪು ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಒಂದು ಟಾಟಾ ಸುಮೋ ವಾಹನದಲ್ಲಿ ಎತ್ತಿ ಹಾಕಿಕೊಂಡು ಅಪಹರಣ ಮಾಡಿದ್ದರು. ಲೋಕೇಶ್ ನನ್ನು ಒತ್ತೆಯಾಳಗಿರಿಸಿಕೊಂಡು ಒಂದು ಕೋಟಿ ರೂ ಗಳಿಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕಿಡ್ನಾಪ್ ಆದ ಲೋಕೇಶ್ ನ ಪತ್ನಿ ನಯನ ರವರು ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಕೂಡಲೇ ಕಾರ್ಯ ಪ್ರವೃತ್ತರಾದ ವಿಜಯನಗರ ಠಾಣೆ ಪೊಲೀಸರು ಕೆಲವೇ ಘಂಟೆಗಳಲ್ಲಿ ಆರೋಪಿಗಳನ್ನು ಕೆ ಆರ್ ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್ ರನ್ನು ರಕ್ಷಣೆ ಮಾಡಿದ್ದಾರೆ.ಲೋಕೇಶ್ ಕುಟುಂಬ ದಿಂದ ಹಣ ಪಡೆಯಲು ಹೋಗಿದ್ದ ಮತ್ತೊಬ್ಬ ಆರೋಪಿ ಪ್ರೀತಮ್ ಗಾಗಿ ತಲಾಷೆ ಮುಂದುವರೆಸಿದ್ದಾರೆ.
ಆರೋಪಿ ಸಂತೋಷ್ ಮೂಲತಃ ಮಂಡ್ಯ ಜಿಲ್ಲೆ, ಕೆ ಆರ್ ಎಸ್ ರಸ್ತೆಯ ಪಂಪ್ ಹೊಸಳ್ಳಿ ಗ್ರಾಮದವನು. ಈತನಿಗೆ ಲೋಕೇಶ್ ನ ಪರಿಚಯವಿತ್ತು ಮತ್ತು ಲೋಕೇಶ್ ಫೈನಾನ್ಸ್ ರಿಯಲ್ ಎಸ್ಟೇಟ್ ನಲ್ಲಿ ಹಣ ಮಾಡಿಕೊಂಡಿರುವ ವಿಚಾರ ಗೊತ್ತಿದ್ದು ಈತ ತನ್ನದೇ ಗ್ರಾಮದ ಪ್ರಜ್ವಲ್, ಪ್ರೀತಮ್, ದರ್ಶನ್ ಹಾಗೂ ಮೇಟಗಳ್ಳಿ ನಿವಾಸಿ ಅಭಿಷೇಕ್ ಎಲ್ಲರೂ ಸಂಚು ರೂಪಿಸಿ ಲೋಕೇಶ್ ನನ್ನು ಇಡ್ನಾಪ್ ಮಾಡಿದರೆ ಒತ್ತೆಯಾಳಗಿ ಇರಿಸಿಕೊಂಡು ಹಣ ಮಾಡಿಕೊಳ್ಳಬಹುದು ಎಂಬ ದುರುದ್ದೇಶ ದಿಂದ ಸುಮಾರು 15 ದಿನ ಹಿಂಬಾಲಿಸಿ ಹೊಂಚು ಹಾಕಿದ್ದರು. ನಿನ್ನೆ ಹೇರಿಟೇಜ್ ಕ್ಲಬ್ ನಿಂದ ಹೊರಬಂದ ಲೋಕೇಶ್ ನನ್ನ ಅಪಹರಿಸಿ ಪತ್ನಿ ಗೆ ಒಂದು ಕೋಟಿ ರೂ ಹಣ ಕಳುಹಿಸುವಂತೆ ಡಿಮ್ಯಾಂಡ್ ಮಾಡಿದ್ದರು. ಇಲ್ಲದಿದ್ದರೆ ಗಂಡನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು.ಈ ಬಗ್ಗೆ ಪತ್ನಿ ನಯನ ರವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರ ವಾಗಿ ಪರಿಗಣಿಸಿ ಎರಡು ಮೂರು ತಂಡಗಳನ್ನ ರಚಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಕೆ ಆರ್ ನಗರ ಹಂಪಾಪುರ ಬಳಿ ಲೋಕೇಶ್ ರನ್ನು ರಕ್ಷಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದರು.ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಯಶಸ್ವಿಯಾಗಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ವಿಜಯನಗರ ಎಸಿಪಿ ರವಿ ಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್ ಎಸ್ ಡಿ ಸುರೇಶ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಗಳಾದ ಜೈ ಕೀರ್ತಿ ಎಂ, ಆನಂದ್ ಹಾಗೂ ಸಿಬ್ಬಂದಿ ಶಂಕರ್, ವೆಂಕಟೇಶ್, ಸುನೀಲ್, ಗಂಗಾಧರ್, ಲಿಖಿತ್, ಮಂಜುನಾಥ್, ಲೋಕೇಶ್, ಚಾಲಕ ಗಿರೀಶ್ ಭಾಗವಹಿಸಿದ್ದರು. ಅಪಹೃತ ವ್ಯಕ್ತಿಯನ್ನ ರಕ್ಷಿಸಿ ಆರೋಪಿಗಳನ್ನು ಬಂಧಿಸಿದ ಇಡೀ ತಂಡಕ್ಕೆ ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್ ಉಪ ಪೊಲೀಸ್ ಆಯುಕ್ತರುಗಳಾದ ಬಿಂದುಮಣಿ ಹಾಗೂ ಸುಂದರರಾಜ್ ಅಭಿನಂದಿಸಿದ್ದಾರೆ…