ಆನ್ ಲೈನ್ ಗೇಮ್:ಮೈಸೂರು ಉದ್ಯಮಿಗೆ 40.71 ಲಕ್ಷ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR…
- CrimeTV10 Kannada Exclusive
- December 9, 2025
- No Comment
- 36
ಮೈಸೂರು,ಡಿ9,Tv10 ಕನ್ನಡ
ಆನ್ ಲೈನ್ ಗೇಮ್ ನಲ್ಲಿ ಹೆಚ್ಚಿನ ಲಾಭ ಗಳಿಸಬಹುದೆಂದು ನಂಬಿ ಹಣ ಹೂಡಿದ ಮೈಸೂರು ಉದ್ಯಮಿಯೊಬ್ಬರು 40.71 ಲಕ್ಷ ಹಣ ಕಳೆದುಕೊಂಡಿದ್ದಾರೆ.ಅಶೋಕಾ ರಸ್ತೆಯ ಉದ್ಯಮಿ ರಾಕೇಶ್ ಎಂಬುವರೇ ಹಣ ಕಳೆದುಕೊಂಡವರು.ಪರಿಚಯದವರೊಬ್ಬರು ಹೇಳಿದ ಮಾತು ನಂಬಿ FUN IN MATCH 360 ಎಂಬ ಆಪ್ ಡೌನ್ ಲೋಡ್ ಮಾಡಿದ ರಾಕೇಶ್ ಎರಡು ಹಂತದಲ್ಲಿ 40.71 ಲಕ್ಷ ಹಣ ಹೂಡಿಕೆ ಮಾಡಿದ್ದಾರೆ.ಖಾತೆಯಲ್ಲಿ ಹೆಚ್ಚಿನ ಲಾಭ ತೋರಿಸಿದೆ.ಹಣ ಡ್ರಾ ಮಾಡಲು ಮುಂದಾದಾಗ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿದೆ.ಈ ಕುರಿತಂತೆ ರಾಕೇಶ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…