ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಧೋಖಾ…ಮಾಲೀಕನ ವಿರುದ್ದ FIR…
- CrimeTV10 Kannada Exclusive
- December 9, 2025
- No Comment
- 91
ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಧೋಖಾ…ಮಾಲೀಕನ ವಿರುದ್ದ FIR…
ಮೈಸೂರು,ಡಿ9,Tv10 ಕನ್ನಡ
25 ಸಾವಿರ ಮೆಟ್ರಿಕ್ ಟನ್ ರಿಫೈನ್ಡ್ ಸಕ್ಕರೆ ಸರಬರಾಜು ಮಾಡುವುದಾಗ ನಂಬಿಸಿದ ಮೈಸೂರು ಉದ್ಯಮಿಯೊಬ್ಬರು ಚತ್ತಿಸ್ ಘಟರ್ ಉದ್ಯಮಿಗೆ 3,29,61,250/- ರೂ ವಂಚಿಸಿರುವ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮೈಸೂರುನ ಡಿ.ಸುಬ್ಬಯ್ಯ ರಸ್ತೆಯ TR group impex,import and export ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ವಿನಯ್ ಎಂಬುವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಚತ್ತಿಸ್ ಘರ್ ನ ರಾಯ್ ಪುರದ ಉದ್ಯಮಿ ಅಮಿತ್ ಕುಮಾರ್ ರಕೇಚಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
25 ಜನವರಿ 2023 ರಂದು ಅಮಿತ್ ಕುಮಾರ್ ರಕೇಚಾ ರವರು ಮೈಸೂರಿನ ಉದ್ಯಮಿ ವಿನಯ್ ಜೊತೆ 25 ಸಾವಿರ ಮೆಟ್ರಿಕ್ ಟನ್ ರಿಫೈನ್ಡ್ ಸಕ್ಕರೆ ಸರಬರಾಜು ಮಾಡುವಂತೆ 3,29,61,250/- ರೂ ಹಣವನ್ನ RTGS ಮೂಲಕ ಪಾವತಿಸಿದ್ದಾರೆ.ಒಂದು ವಾರದಲ್ಲಿ ಸಕ್ಕರೆ ಸರಬರಾಜು ಮಾಡುವುದಾಗಿ ಇಬ್ಬರ ನಡುವೆ ಒಪ್ಪಂದವಾಗಿದೆ.ಇದಯವರೆಗೆ ಒಂದು ಕೆಜಿ ಸಕ್ಕರೆ ಸಹ ಸರಬರಾಜು ಮಾಡಿಲ್ಲ.ಈ ಬಗ್ಗೆ ನಿರಂತರವಾಗಿ ಮನವಿ ಮಾಡಿದರೂ ವಿನಯ್ ರವರಿಂದ ಯಾವುದೇ ಸೂಕ್ತ ಉತ್ತರವಿಲ್ಲ.ತಮಗೆ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಮೋಸ ಮಾಡಿದ ವಿನಯ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅಮಿತ್ ಕುಮಾರ್ ರಕೇಚಾ ಪ್ರಕರಣ ದಾಖಲಿಸಿದ್ದಾರೆ…