ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು ಪ್ರತ್ಯೇಕ ಪ್ರಕರಣಗಳು ದಾಖಲು…ಇಬ್ಬರು ಮಧ್ಯವರ್ತಿ ಸೇರಿದಂತೆ 8 ಮಂದಿ ವಿರುದ್ದ FIR
- Crime
- December 11, 2025
- No Comment
- 24
ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು ಪ್ರತ್ಯೇಕ ಪ್ರಕರಣಗಳು ದಾಖಲು…ಇಬ್ಬರು ಮಧ್ಯವರ್ತಿ ಸೇರಿದಂತೆ 8 ಮಂದಿ ವಿರುದ್ದ FIR
ಮೈಸೂರು,ಡಿ11,Tv10 ಕನ್ನಡ
ನಕಲಿ ದಾಖಲೆ ಸೃಷ್ಟಿಸಿ ಮೈಸೂರಿನ ವಿವಿ ಮೊಹಲ್ಲಾದಲ್ಲಿರುವ ICICI ಬ್ಯಾಂಕ್ ಗೆ ಮೂರು ಪ್ರತ್ಯೇಕ ಪ್ರಕರಣದಲ್ಲಿ 2.33 ಕೋಟಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.ಮೂರು ಪ್ರಕರಣಗಳಿಂದ ಇಬ್ಬರು ಮಧ್ಯವರ್ತಿಗಳು ಸೇರಿದಂತೆ 8 ಮಂದಿ ವಿರುದ್ದ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ICICI ಬ್ಯಾಂಕ್ ನ ವಸಂತ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ.
ಮೊದಲನೆ ಪ್ರಕರಣದಲ್ಲಿ ಸಾಲಗಾರ ಚಂದ್ರಶೇಖರ್,ಸಹ ಸಾಲಗಾರ ಸಂದೀಪ್ ಹಾಗೂ ಮಧ್ಯವರ್ತಿ ಪ್ರತಾಪ್ ಎಂಬುವರ ವಿರುದ್ದ FIR ದಾಖಲಾಗಿದೆ.ಇವರುಗಳು ನಕಲಿ ದಾಖಲೆಗಳನ್ನ ಸೃಷ್ಟಿಸಿ ಬ್ಯಾಂಕ್ ಗೆ 45 ಲಕ್ಷ ವಂಚಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎರಡನೇ ಪ್ರಕರಣದಲ್ಲಿ ಸಾಲಗಾರ ರವಿಕೀರ್ತಿ,ಸಹಸಾಲಗಾರ ರಂಜನ್ ಹಾಗೂ ಮಧ್ಯವರ್ತಿ ರೋಷನ್ ರವರುಗಳು ಬ್ಯಾಂಕ್ ಗೆ ನಕಲಿ ದಾಖಲೆ ಸಲ್ಲಿಸಿ 65,55,187/- ರೂ ವಂಚಿಸಿದ್ದಾರೆಂದು ಉಲ್ಲೇಖಿಸಲಾಗಿದೆ.
ಮೂರನೇ ಪ್ರಕರಣದಲ್ಲಿ ಸಾಲಗಾರ ರೋಷನ್ ಹಾಗೂ ಸಹಸಾಲಗಾರರಾದ ಸುಹಾನ ಎಂಬುವರು ನಕಲಿ ದಾಖಲೆ ನೀಡಿ 1,22,10,470/- ರೂ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸದರಿ ಆರೋಪಿಗಳು 2022 ರಲ್ಲಿ ನಕಲಿ ದಾಖಲೆಗಳನ್ನ ಸಲ್ಲಿಸಿ ಸಾಲ ಪಡೆದಿದ್ದಾರೆ.ಆದರೆ ಹಣ ಮರುಪಾವತಿ ಮಾಡಿರುವುದಿಲ್ಲ.ಈ ವೇಳೆ ಪರಿಶೀಲನೆ ನಡೆಸಿದಾಗ ನಕಲಿ ದಾಖಲೆ ನೀಡಿರುವುದು ಸ್ಪಷ್ಟವಾಗಿದೆ.