ಸುಟ್ಟು ಕರುಕಲಾದ KSRTC ಬಸ್…ಅದೃಷ್ಟವಶಾತ್ ಪ್ರಯಾಣಿಕರು ಪಾರು…
- TV10 Kannada Exclusive
- December 19, 2025
- No Comment
- 184

ಸುಟ್ಟು ಕರುಕಲಾದ KSRTC ಬಸ್…ಅದೃಷ್ಟವಶಾತ್ ಪ್ರಯಾಣಿಕರು ಪಾರು…
ನಂಜನಗೂಡು,ಡಿ19,Tv10 ಕನ್ನಡ
ಚಲಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣ ಸುಟ್ಟು ಕರುಕಲಾದ ಘಟನೆ ನಂಜನಗೂಡಿನ ಹೊಸಳ್ಳಿ ಗೇಟ್ ಬಳಿ ನಡೆದಿದೆ.ಬಸ್ ನಲ್ಲಿದ್ದ 40 ಕ್ಕೂ ಹೆಚ್ಚು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮೈಸೂರಿನಿಂದ ಕೇರಳಾಗೆ ತೆರಳುತ್ತಿದ್ದ KL15 A 2444 ನೊಂದಣಿ ಸಂಖ್ಯೆ ಬಸ್ ನಲ್ಲಿ ಮಧ್ಯರಾತ್ರಿ ವೇಳೆ ಧಿಢೀರ್ ಬೆಂಕಿ ಕಾಣಿಸಿಕೊಂಡಿದೆ.ಎಚ್ಚೆತ್ತ ಚಾಲಕ ಹೊಸಳ್ಳಿ ಗೇಟ್ ಬಳಿ ನಿಲ್ಲಿಸಿ ಪ್ರಯಾಣಿಕರನ್ನ ಇಳಿಸಿದ್ದಾರೆ.ಕೆಲವೇ ನಿಮಿಷಗಳಲ್ಲಿ ಬೆಂಕಿ ವ್ಯಾಪಿಸಿ ಬಸ್ ಸುಟ್ಟು ಕರುಕಲಾಗಿದೆ.ಅಗ್ನಿಶಾಮಕ ಸಿಬ್ಬಂದಿಗಳ ಆಗಮನಕ್ಕೆ ಮುನ್ನವೇ ಬಸ್ ಸುಟ್ಟು ಕರುಕಲಾಗಿದೆ.ಕೇರಳಾ ರಾಜ್ಯಕ್ಕೆ ಸೇರಿದ ಬಸ್.ಪ್ರಯಾಣಿಕರಿಗೆ ಪರ್ಯಾಯ ಬಸ್ ವ್ಯವಸ್ಥೆ ಮಾಡಲಾಗಿದೆ.ನಂಜನಗೂಡು ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ…