ಕರುಗಳಿಗೆಗೆ ತೊಟ್ಟಲು ಶಾಸ್ತ್ರ…ಗೋವುಗಳಿಗೆ ವಿಶೇಷ ಆರಾಧನೆ…
- TV10 Kannada Exclusive
- December 30, 2025
- No Comment
- 4
ಕರುಗಳಿಗೆಗೆ ತೊಟ್ಟಲು ಶಾಸ್ತ್ರ…ಗೋವುಗಳಿಗೆ ವಿಶೇಷ ಆರಾಧನೆ…
ಮೈಸೂರು,ಡಿ30,Tv10 ಕನ್ನಡ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕುಟುಂಬವೊಂದು ಗೋವುಗಳಿಗೆ ವಿಶೇಷ ಸ್ಥಾನ ಕಲ್ಪಿಸಿದೆ.ಮನೆಯಲ್ಲಿ ಹುಟ್ಟಿದ ಕರುಗಳಿಗೆ ತೊಟ್ಟಿಲು ಶಾಸ್ತ್ರ ನೆರವೇರಿಸಿ ಗೋಮಾತೆ ಎಂಬ ಪದಗಳಿವೆ ವಿಶೇಷ ಅರ್ಥ ಕಲ್ಪಿಸಿದೆ.ಶಾರದಾ ವಿಲಾಸ ಕಾಲೇಜಿನ ಹಿಂಬಾಗದ ಕೆ ಆರ್ ವನಂ ಎಂಬಲ್ಲಿ 3 ವರ್ಷಗಳಿಂದ ಪುಂಗನೂರು ಎಂಬ ಆಂದ್ರ ಪ್ರದೇಶ ಮೂಲದ ಕುಟುಂಬ ದೇಸಿ ಹಸುಗಳನ್ನು ಸಾಕುತ್ತಿದ್ದಾರೆ. ಮಧುಸೂದನ ತಾತಾಚಾರ್ಯ ಮತ್ತು ಕುಟುಂಬದವರು ಮೂರು ಹಸು ಮತ್ತು ಎರಡು ಕರುಗಳನ್ನು ಮನೆಯ ಕಾರ್ ಶೆಡ್ನಲ್ಲಿ ಇಟ್ಟುಕೊಂಡಿದ್ದಾರೆ. ಕಾರ್ ಶೆಡ್ ಅನ್ನು ಗೋವುಗಳ ಸಾಕಾಣಿಕೆಗೆ ಅನುಕೂಲವಾಗುವಂತೆ ಪರಿವರ್ತಿಸಿ – ಸಿರಿ, ನಿಧಿ, ಸಿಹಿ ಎಂಬ ಹಸುಗಳು ಮತ್ತು ಸಿರಿಯ ಮಗಳಾದ ಭುವಿ ಮತ್ತು ನಿಧಿಯ ಮಗಳಾದ ಸ್ವಾತಿ ಎಂಬ ಕರುಗಳನ್ನು ಸಾಕುತ್ತಿದ್ದಾರೆ.ಇತ್ತೀಚೆಗಷ್ಟೇ ಎರಡೂ ಕರುಗಳಿಗೆ ತೊಟ್ಟಿಲು ಶಾಸ್ತ್ರವನ್ನು ನೆರವೇರಿಸಿದ್ದಾರೆ. ಮಕ್ಕಳಂತೆ, ಮನೆಯ ಸದಸ್ಯರಂತೆ ಹಸುಗಳನ್ನು ಸಾಕುವ ವಿಶಿಷ್ಟ ಸಂಸ್ಕೃತಿಯು ನಮ್ಮ ದೇಶದಲ್ಲಿದೆ. ಅದರಂತೆ ನಾವು ಮನೆಯ ಮಕ್ಕಳಂತೆ ಹಸುಗಳನ್ನು ನೋಡಿಕೊಳ್ಳುತ್ತಾ, ಮಾತೃ ಸ್ವರೂಪವಾದ, ಮುಕ್ಕೋಟಿ ದೇವತೆಗಳು ವಾಸಸ್ಥಾನವಾದ ಗೋವುಗಳ ಸೇವೆಯನ್ನು ಮಾಡಿಕೊಂಡು ಬಂದಿದ್ದೇವೆ.ಬಂಧುಗಳು, ಕುಟುಂಬದವರು, ಹಿತೈಷಿಗಳು, ನೆರೆಹೊರೆಯವರು, ಗೋಭಕ್ತರು, ಸ್ನೇಹಿತರು- ಇವರೆಲ್ಲರ ಸಹಕಾರ ಮತ್ತು ಪ್ರೋತ್ಸಾಹಗಳೊಂದಿಗೆ ಹರಿ ಬ್ರಹ್ಮ ಗೋ ಸೇವಾ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮೂಲತಃ ತಲಕಾಡಿನ ಹೊಸಬೀದಿಯಲ್ಲಿರುವ ತಮ್ಮ ಪೂರ್ವಿಕರ ಮನೆಯಲ್ಲಿ 10 ವರ್ಷಗಳಿಂದ ಗೋಶಾಲೆಯನ್ನು ನಡೆಸುತ್ತಿದ್ದಾರೆ. ದೇಸಿ ತಳಿಗಳಾದ ಒಂಗೋಲ್, ತಾರ್ ಪಾರ್ಕರ್, ಗೀರ್, ಬರಗೂರು,ಸಾಹಿವಾಲ್ ತಳಿಗಳನ್ನು ಇಲ್ಲಿ ಉಳಿಸಿ ಬೆಳೆಸಲಾಗುತ್ತಿದೆ. ಉತ್ಕೃಷ್ಟ ಗುಣಮಟ್ಟದ ಹಾಲನ್ನು ಕೊಡುವಂತಹ, ಆರೋಗ್ಯಕರ ವಾತಾವರಣವನ್ನು ನಿರ್ಮಿಸುವ, ಸ್ನೇಹಮಯ ಜೀವಿಗಳಾದ, ಸಾಕಿದವರ ಮನೆಯಲ್ಲಿ ನೆಮ್ಮದಿಯನ್ನುಂಟುಮಾಡುವ, ಮಕ್ಕಳಂತೆ ಆಡುವ, ತಾಯಿಯಂತೆ ಕಾಯುವ, ವಿಶೇಷ ಲಕ್ಷಣಗಳಿಂದ ಕೂಡಿದ ಸುಂದರ ರೂಪವುಳ್ಳ ನಮ್ಮ ಭಾರತೀಯ ಗೋ ತಳಿಗಳು ಮನುಕುಲದ ನಿರ್ಲಕ್ಷ್ಯದ ಕಾರಣ ಇಂದು ಅಳಿವಿನ ಅಂಚಿಗೆ ಬಂದಿದೆ. ಕೇವಲ ಹಾಲು ಉತ್ಪಾದನೆ ಮತ್ತು ಹಣ ಸಂಪಾದನೆಯನ್ನು ಗುರಿಯಾಗಿ ಇಟ್ಟುಕೊಳ್ಳದೆ ದೇಸಿ ಗೋವುಗಳನ್ನು ಸ್ವತ: ಬೆಳೆಸುವುದು ಅಥವಾ ಅವುಗಳನ್ನು ಬೆಳೆಸುವ ಗೋಶಾಲೆಗಳಿಗೆ ಎಲ್ಲ ರೀತಿಯ ಸಹಕಾರ ನೀಡುವುದು ಸಮಾಜವು ಒಗ್ಗಟ್ಟಿನಿಂದ ನಿಂದು ಮಾಡಬೇಕಾದ ಜವಾಬ್ದಾರಿಯುತ ಕೆಲಸವಾಗಿದೆ. ನಮ್ಮ ದೇಶದ ಗೋವು ಎಂಬ ಸಂಪತ್ತನ್ನು ಉಳಿಸಿ, ಬೆಳೆಸಿ, ಆರೋಗ್ಯಕರ ಸಮಾಜವನ್ನು ನಿರ್ಮಿಸುವ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂಬ ಸಂದೇಶ ಸಾರಿದ್ದಾರೆ…