ಬೈಕ್ ಸಮೇತ ಸಜೀವ ದಹನವಾದ ಯುವಕ…ಕೊಲೆಯೋ…?ಆಕಸ್ಮಿಕವೋ…?

ಬೈಕ್ ಸಮೇತ ಸಜೀವ ದಹನವಾದ ಯುವಕ…ಕೊಲೆಯೋ…?ಆಕಸ್ಮಿಕವೋ…?

  • Crime
  • December 30, 2025
  • No Comment
  • 111

ಬೈಕ್ ಸಮೇತ ಸಜೀವ ದಹನವಾದ ಯುವಕ…ಕೊಲೆಯೋ…?ಆಕಸ್ಮಿಕವೋ…?

ನಂಜನಗೂಡು,ಡಿ30,Tv10 ಕನ್ನಡ

ಬೈಕ್ ಸಮೇತ ಯುವಕ ಸಜೀವ ದಹನವಾದ ಪ್ರಕರಣ ನಂಜನಗೂಡು ಪೊಲೀಸರ ನಿದ್ದೆ ಕೆಡಿಸಿದೆ.ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳು ಉದ್ಭವಿಸಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ನಿನ್ನೆ ಸಂಜೆ ವೇಳೆ ನಂಜನಗೂಡಿನಿಂದ ಕೊರಹುಂಡಿಗೆ ತೆರಳುವ ಮಾರ್ಗದ ಹುಲ್ಲಹಳ್ಳಿ ನಾಲೆ ಪಕ್ಕದಲ್ಲಿ ಬೈಕ್ ನಿಂದ ಯುವಕ ಬೆಂಕಿ ಜ್ವಾಲೆಗಳ ಮಧ್ಯೆ ಓಡಿ ಬಂದು ಬಿದ್ದಿದ್ದಾನೆ.ಕೆಲವೇ ಕ್ಷಣಗಳಲ್ಲಿ ಯುವಕನ ದೇಹ ಸುಟ್ಟುಹೋಗಿದೆ.ಬೈಕ್ ಸಹ ಸುಟ್ಟು ಕರುಕಲಾಗಿದೆ.ಇದನ್ನ ಗಮನಿಸಿದ ಸ್ಥಳೀಯರು ನೆರವಿಗೆ ಧಾವಿಸಿದರಾದ್ರೂ ಯುವಕನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ.ರಾಂಪುರ ನಿವಾಸಿ ಆದಿತ್ಯ(24). ಮೃತಪಟ್ಟ ಯುವಕ.ಈತನ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.ಬೈಕ್ ಗೆ ಬೆಂಕಿ ಹತ್ತಿಕೊಂಡರೆ ಓಡಿ ತಪ್ಪಿಸಿಕೊಳ್ಳಬಹುದಿತ್ತು…ಆದ್ರೆ ಬೈಕ್ ಸಮೇತ ಯುವಕ ಸಹ ಸುಟ್ಟು ಹೋಗಿರುವುದು ಸಹಜವಲ್ಲ ಎಂಬುದು ಕುಟುಂಬಸ್ಥರು ಆರೋಪ.ನಿರ್ಜನ ಪ್ರದೇಶಕ್ಕೆ ಏಕಾಂಗಿಯಾಗಿ ಹೋಗುವ ಬಗ್ಗೆ ಅನುಮಾನವಿದೆ. ಬಂದಿದ್ದಾರೆ.ಯಾರೋ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ.

ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ನಂಜನಗೂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಮೇಲ್ನೋಟಕ್ಕೆ ಆದಿತ್ಯ ಸಾವು ಕೊಲೆ ಇರಬಹುದೆಂದೇ ಶಂಕಿಸಲಾಗಿದೆ.ಕೂಡಲೇ ಕುಟುಂಬಸ್ಥರ ಮನವಿಗೆ ಪೊಲೀಸರು ಸ್ಪಂದಿಸಬೇಕಿದೆ…

Spread the love

Related post

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ…

ಲಾಡ್ಜ್ ನಲ್ಲಿ ಮಹಿಳೆ ಭೀಕರ ಕೊಲೆ…ಪ್ರಿಯತಮನಿಂದ ಕೃತ್ಯ… ಮೈಸೂರು,ಅ12,Tv10 ಕನ್ನಡ ಮಹಿಳೆಯನ್ನ ಲಾಡ್ಜ್ ನಲ್ಲಿ ಭೀಕರವಾಗಿ ಕೊಂ* ಘಟನೆ ಮೈಸೂರಿ ನಲ್ಲಿ ನಡೆದಿದೆ.ಕೃತ್ಯವೆಸಗಿದ ನಂತರ ಪರಾರಿಯಾಗಿದ್ದ ಪ್ರಿಯತಮನನ್ನ 24…
ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ…

ವ್ಯಕ್ತಿ ಭೀಕರ ಕೊಲೆ…ಮಾರಕಾಸ್ತ್ರಗಳಿಂದ ದಾಳಿ…6 ಮಂದಿ ಗ್ಯಾಂಗ್ ನಿಂದ ಕೃತ್ಯ…ಅಕ್ರಮ ಸಂಬಂಧ ಶಂಕೆ… ಮೈಸೂರು,ಅ4,Tv10 ಕನ್ನಡ ಮೈಸೂರಿನ ಗೋಕುಲಂನಲ್ಲಿ ಜನರ ತಂಡ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ…
ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ…

ಮಗನನ್ನೇ ಅಪಹರಿಸಿದ ತಂದೆ…55 ಲಕ್ಷಕ್ಕೆ ಡಿಮ್ಯಾಂಡ್…ಪತ್ನಿಗೆ ಬೆದರಿಕೆ…ಬಾಲಕ ರಕ್ಷಣೆ…ಸುಖಾಂತ್ಯ ಕಂಡ ಅಪಹರಣ ಪ್ರಕರಣ… ಮೈಸೂರು,ಸೆ30,Tv10 ಕನ್ನಡ ಹಣಕ್ಕಾಗಿ ಮಗನನ್ನೇ ಅಪಹರಿಸಿದ ತಂದೆ ಪತ್ನಿಗೆ 55 ಲಕ್ಷಕ್ಕೆ ಬೇಡಿಕೆ ಇಟ್ಟು…

Leave a Reply

Your email address will not be published. Required fields are marked *