ಸರ್ವೆ ಸೂಪರ್ ವೈಸರ್ ಎಸ್.ಜಿ.ಮಂಜುನಾಥ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ…ವಿಜೇತರಿಗೆ ಬಹುಮಾನ ವಿತರಣೆ…
- TV10 Kannada Exclusive
- January 11, 2026
- No Comment
- 130

ಸರ್ವೆ ಸೂಪರ್ ವೈಸರ್ ಎಸ್.ಜಿ.ಮಂಜುನಾಥ್ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ…ವಿಜೇತರಿಗೆ ಬಹುಮಾನ ವಿತರಣೆ…
ಶ್ರೀರಂಗಪಟ್ಟಣ,ಜ11,Tv10 ಕನ್ನಡ
ಶ್ರೀರಂಗಪಟ್ಟಣ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಯಲ್ಲಿ ಪರ್ಯಾಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಸ್ ಜಿ ಮಂಜುನಾಥ್ ರವರ ಸ್ಮರಣಾರ್ಥವಾಗಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಭೂದಾಖಲೆಗಳ ಸಹಾಯಕ ನಿರ್ದೇಶಕರಾಗಿರುವ ಮಹಮದ್ ಹುಸೇನ್ ರವರ ನೇತೃತ್ವದಲ್ಲಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಒಳಗೊಂಡು ಮೂರು ತಂಡಗಳನ್ನು ರಚನೆ ಮಾಡಿ ಆ ಎಲ್ಲಾ ತಂಡಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. ತಂಡದ ಉಸ್ತುವಾರಿಯನ್ನು ಕಚೇರಿಯ ಅಧೀಕ್ಷಕರಾದ ಮರಿಸ್ವಾಮಿ ನೆರವೇರಿಸಿದರು. ಕ್ರೀಡಾಂಗಣದ ಜವಾಬ್ದಾರಿಯನ್ನು ಕಚೇರಿಯ ಸಿಬ್ಬಂದಿಯಾದ ನಿತಿನ್ ಅವರು ವಹಿಸಿಕೊಂಡಿದ್ದರು. ದಿವಂಗತ ಎಸ್ ಜಿ ಮಂಜುನಾಥ್ ಅವರ ಧರ್ಮಪತ್ನಿ ಎಸ್ ಪವಿತ್ರ ರವರು ಜ್ಯೋತಿ ಬೆಳಗುವ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ಮೊಹಮ್ಮದ್ ಹುಸೇನ್ ರವರು ಮಾತನಾಡಿ ದಿವಂಗತ ಎಸ್ ಜಿ ಮಂಜುನಾಥ್ ರವರು ಕಚೇರಿಯಲ್ಲಿ ಎಲ್ಲರನ್ನೂ, ಕಚೇರಿಯ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ವಿಧಿ ಆಟ ಅವರ ಬಾಳಲ್ಲಿ ಬಿರುಗಾಳಿಯಂತೆ ಬಂದು ಅಕಾಲಿಕ ಮರಣ ಹೊಂದಿದರು.ಅವರ ಕುಟುಂಬಕ್ಕೆ ಅಗಲಿಕೆಯ ನೋವನ್ನ ಭರಿಸಲು ದೇವರು ಶಕ್ತಿ ಕೊಡಲಿ ಎಂದು ತಿಳಿಸಿದರು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಅರವಿಂದ್, ದರ್ಶನ ನಾಯಕ್,ಸಂಜಯ್,ಪುನೀತ್, ಸುರೇಶ್ ಕುಮಾರ್, ನಂಜುಂಡೇಗೌಡ, ರಚನಾ, ಜಸ್ವಂತ್, ಜಯಬೋರೇಗೌಡ,ಪರಮೇಶ್, ನಂದೀಶ್,ಲೋಕೇಶ್ ಮತ್ತು ಇತರರು ರವರಿಗೆ ಕಪ್ ವಿತರಿಸಿದರು. ಕಾರ್ಯಕ್ರಮದಲ್ಲಿ ಭೂ ದಾಖಲೆಗಳ ಸಹಾಯಕರಾದ ಮಹಮದ್ ಹುಸೇನ್ ರವರು, ದಿವಂಗತ ಎಸ್ ಜಿ ಮಂಜುನಾಥ್ ರವರ ಧರ್ಮಪತ್ನಿ ಎಸ್ ಪವಿತ್ರ ಅದಿಕ್ಷಕರಾದ ಮರಿಸ್ವಾಮಿ,ಸೂಪರ್ವೈಸರ್, ಸುರೇಶ್, ಯೋಗರಾಜ್, ಅರವಿಂದ್, ನಿವೃತ್ತ ಮುಖ್ಯೋಪಾಧ್ಯಾಯರಾದ ಸೋಮೇಗೌಡ,ನಗುವನಹಳ್ಳಿ ಸೋಮೇಶ್ ರವರು ಭಾಗವಸಿದ್ದರು..