ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಸ್ಪರ್ಧೆ…ಮೈಸೂರಿನಿಂದ ಪ್ರಚಾರ ಕಾರ್ಯ ಆರಂಭ…
- TV10 Kannada Exclusive
- January 8, 2026
- No Comment
- 23
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನಟಿ ಜಯಮಾಲಾ ಸ್ಪರ್ಧೆ…ಮೈಸೂರಿನಿಂದ ಪ್ರಚಾರ ಕಾರ್ಯ ಆರಂಭ…
ಮೈಸೂರು,ಜ8,Tv10 ಕನ್ನಡ
ಜನವರಿ 30 ರಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದೆ.ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಅಧ್ಯಕ್ಷರು ಹಾಗೂ ನಟಿ ಜಯಮಾಲಾ ರವರ ಸ್ಪರ್ಧಿಸುತ್ತಿದ್ದಾರೆ. ಪ್ರಚಾರವನ್ನ ಮೈಸೂರಿನಿಂದ ಆರಂಭಿಸಿದ್ದಾರೆ.ಮೈಸೂರಿಗೆ ಭೇಟಿ ಕೊಟ್ಟು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ನಂತರ ನಗರದ ಸಂದೇಶ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಪ್ರಚಾರವನ್ನು ಪ್ರಾರಂಭಿಸಿದರು.ಪ್ರಚಾರ ಕಾರ್ಯಕ್ಕೆ ಮಾಜಿ ಅಧ್ಯಕ್ಷರಾದ ಸಾರಾ ಗೋವಿಂದ್, ಹಾಲಿ ಅಧ್ಯಕ್ಷರಾದ ನರಸಿಂಹ ಕೊಲ್ಲು ಚಿನ್ನೇಗೌಡ, ಎಂ ಎನ್ ಸುರೇಶ್, ಎಂ ಎನ್ ಕುಮಾರ್, ಸಂದೇಶ್ ನಾಗರಾಜ್, ಕಾರ್ಯದರ್ಶಿ ಗಣೇಶ್, ರಾಮಕೃಷ್ಣ, ಅಶೋಕ್ ಕುಮಾರ್, ಹಾಗೂ ಇನ್ನಿತರರು ಸಾಥ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಗೋಲ್ಡನ್ ಸುರೇಶ್ ಫಿಲಂಸ್ ವತಿಯಿಂದ ಜಯಮಾಲ ರವರಿಗೆ ಸನ್ಮಾನಿಸಿ ತಮ್ಮ ತಂಡಕ್ಕೆ ಬೆಂಬಲ ಸೂಚಿಸಿದ್ದಾರೆ.
ಈ ಸಂದರ್ಭದಲ್ಲಿ ನಿರ್ಮಾಪಕರಾದ ಎಂ ಡಿ ಪಾರ್ಥಸಾರಥಿ,ಸುರೇಶ್ ಗೋಲ್ಡ್, ನಂದೀಶ್ ನಾಯಕ್, ವಿಕ್ರಂ ಅಯ್ಯಂಗಾರ್, ಪ್ರಮೀಳಾ, ಶೋಭಾ, ಹಾಗೂ ಇನ್ನಿತರರು ಶುಭ ಕೋರಿದ್ದಾರೆ…