ಮೈಸೂರಿನಲ್ಲಿ ತಲೆ ಎತ್ತಲಿರುವ ನಿಮ್ಹಾನ್ಸ್ ಮಾದರಿ ಆಸ್ಪತ್ರೆ…ಸಿಎಂ ಸ್ವಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆ…ಮುಖ್ಯಮಂತ್ರಿಗಳ ಮಹತ್ತರ ಯೋಜನೆಗೆ ಗ್ರೀನ್ ಸಿಗ್ನಲ್…ಅನಧಿಕೃತ ಸ್ವಾಧೀನದಲ್ಲಿದ್ದ ರೈತರಿಗೆ ಗೇಟ್ ಪಾಸ್…ಸರ್ಕಾರದ ವಶಕ್ಕೆ ಜಮೀನು…ಸಾಕಾರಗೊಳ್ಳಲಿರುವ ಸಿಎಂ ಸಿದ್ದರಾಮಯ್ಯ ಕನಸು…
- TV10 Kannada Exclusive
- January 18, 2026
- No Comment
- 108

ಮೈಸೂರಿನಲ್ಲಿ ತಲೆ ಎತ್ತಲಿರುವ ನಿಮ್ಹಾನ್ಸ್ ಮಾದರಿ ಆಸ್ಪತ್ರೆ…ಸಿಎಂ ಸ್ವಕ್ಷೇತ್ರದಲ್ಲಿ ನಿರ್ಮಾಣವಾಗಲಿರುವ ಆಸ್ಪತ್ರೆ…ಮುಖ್ಯಮಂತ್ರಿಗಳ ಮಹತ್ತರ ಯೋಜನೆಗೆ ಗ್ರೀನ್ ಸಿಗ್ನಲ್…ಅನಧಿಕೃತ ಸ್ವಾಧೀನದಲ್ಲಿದ್ದ ರೈತರಿಗೆ ಗೇಟ್ ಪಾಸ್…ಸರ್ಕಾರದ ವಶಕ್ಕೆ ಜಮೀನು…ಸಾಕಾರಗೊಳ್ಳಲಿರುವ ಸಿಎಂ ಸಿದ್ದರಾಮಯ್ಯ ಕನಸು…
ಮೈಸೂರು,ಜ16,Tv10 ಕನ್ನಡ
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸ್ವಕ್ಷೇತ್ರ ವರುಣಾ ಹೋಬಳಿ ಗುಡಮಾದನಹಳ್ಳಿ ಗ್ರಾಮದಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ತಲೆ ಎತ್ತಲಿದೆ.ಸಿದ್ದರಾಮಯ್ಯನವರ ಬಹುದಿನಗಳ ಕನಸು ಸಾಕಾರಗೊಳ್ಳುವ ಸಮಯ ಬಂದಿದೆ.20 ಎಕ್ರೆ ವ್ಯಾಪ್ತಿ ಪ್ರದೇಶದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ.ಅನಧಿಕೃತವಾಗಿ ಸ್ವಾಧೀನದಲ್ಲಿದ್ದ ರೈತರಿಗೆ ಗೇಟ್ ಪಾಸ್ ಕೊಟ್ಟ ತಾಲೂಕು ಆಡಳಿತ ಜಮೀನನ್ನ ತನ್ನ ವಶಕ್ಕೆ ಪಡೆದು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಿಸಿದೆ.ಗುಡಮಾದನಹಳ್ಳಿ ಸರ್ವೆ ನಂ.60 ಮತ್ತು 68 ರಲ್ಲಿ 20 ಎಕ್ರೆ ಜಮೀನು ಆಸ್ಪತ್ರೆಗಾಗಿ ಮೀಸಲಿಡಲಾಗಿತ್ತು.ಸದರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಕೆಲವು ಸ್ಥಳೀಯರು ಅನಧಿಕೃತವಾಗಿ ಸಾಗುವಳಿ ಮಾಡಿಕೊಂಡಿದ್ದರು.ಇವರನ್ನ ಎತ್ತಂಗಡಿ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿತ್ತು.ಸಾಕಷ್ಟು ವಿರೋಧವನ್ನೂ ಎದುರಿಸಿತ್ತು.ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಮಹತ್ತರ ಯೋಜನೆ ಸಾಕಾರಗೊಳಿಸಲು ನಿರ್ಧರಿಸಿದ ತಾಲೂಕು ಆಡಳಿತ ಇಂದು ಅನಧಿಕೃತವಾಗಿ ಸ್ವಾಧೀನದಲ್ಲಿದ್ದ ಸ್ಥಳೀಯರಿಗೆ ಶಾಕ್ ಕೊಟ್ಟಿದೆ.ಪೊಲೀಸರ ಸಮೇತ ಹಾಜರಾದ ತಹಸೀಲ್ದಾರ್ ಕೆ.ಎಂ.ಮಹೇಶ್ ಕುಮಾರ್ ರವರು ಸದರಿ ಜಮೀನು ವಶಕ್ಕೆ ಪಡೆಯಲು ಮುಂದಾದಾಗ ಪ್ರತಿಭಟನೆ ಎದುರಿಸಬೇಕಾಯಿತು.ರೈತ ಸಂಘದ ನೆರವಿನಿಂದ ಸ್ವಾಧೀನದಲ್ಲಿದ್ದ ರೈತರು ಭಾರಿ ವಿರೋಧ ವ್ಯಕ್ತಪಡಿಸಿದರು.ವಿರೋಧ ಲೆಕ್ಕಿಸದ ತಹಸೀಲ್ದಾರ್ ಮಹೇಶ್ ಕುಮಾರ್ ಹಾಗೂ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶೇಖರ್ ರವರು ಮನ ಒಲಿಸುವಲ್ಲಿ ಯಶಸ್ವಿಯಾದರು.ಗುಡಮಾದನಹಳ್ಳಿಯ ಸರ್ವೆ ನಂ.8,60,68 ರಲ್ಲಿ ಆಶ್ರಯ ಯೋಜನೆಗಾಗಿ 8 ಎಕ್ರೆ 10 ಗುಂಟೆ ಜಮೀನು ಸಹ ಕಾಯ್ದಿರಿಸಲಾಗಿದೆ.ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಾಣದ ಜೊತೆಗೆ ಆಶ್ರಯ ಯೋಜನೆಯ ನಿವೇಶನಗಳ ರಚನೆಯೂ ನಡೆಯಲಿದ್ದು ಅನಧಿಕೃತವಾಗಿ ಸ್ವಾಧೀನದಲ್ಲಿರುವ ಸ್ಥಳೀಯರಿಗೆ ಅರ್ಹತೆಗೆ ಅನುಗುಣವಾಗಿ ನಿವೇಶನ ನೀಡುವ ಭರವಸೆ ನೀಡಿದ ನಂತರ ಸ್ವಯಂಪ್ರೇರಿತವಾಗಿ ಜಮೀನು ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದರು.ಆಸ್ಪತ್ರೆ ನಿರ್ಮಾಣದ ಉದ್ದೇಶಿತ ಜಮೀನಿನಲ್ಲಿ ಬೆಳೆಯಲಾಗಿದ್ದ ಬಾಳೆ ತೋಟ ಸಹ ಜೆಸಿಬಿ ಮೂಲಕ ತೆರುವುಗೊಳಿಸಲಾಯಿತು.ಇದಲ್ಲದೆ ಸರ್ವೆ ನಂ.60 ರಲ್ಲಿ 1 ಎಕ್ರೆ 38 ಗುಂಟೆ ಸ್ಮಶಾನಕ್ಕಾಗಿ ಮೀಸಲಿಡಲಾಗಿದೆ.ಸರ್ವೆ ನಂ.4 ರಲ್ಲಿ 20 ಗುಂಟೆ ಜಮೀನು ಒಕ್ಕಲಿಗರ ಸಂಘದ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ.ಉಳಿದ 2 ಎಕ್ರೆ 20 ಗುಂಟೆ ಜಾಗದಲ್ಲಿ ಆಟದ ಮೈದಾನ ಬರಲಿದೆ.ಒಟ್ಟಾರೆ ಮುಖ್ಯಮಂತ್ರಿಗಳ ಸ್ವಕ್ಷೇತ್ರದಲ್ಲಿ ನಿಮ್ಹಾನ್ಸ್ ಮಾದರಿಯ ಆಸ್ಪತ್ರೆ ನಿರ್ಮಿಸುವ ಬಹುದಿನಗಳ ಕನಸು ಸಾಕಾರಗೊಳ್ಳಲಿದೆ…