ಕಾಂಚಳ್ಳಿ ಪ್ರೀಮಿಯಾರ್ ಲೀಗ್ ಸೀಸನ್ 02ಶ್ರೀ ಮಲೈ ವಾರಿಯರ್ಸ್ ಚಾಂಪಿಯನ್.
- TV10 Kannada Exclusive
- January 18, 2026
- No Comment
- 151
ಕಾಂಚಳ್ಳಿ ಪ್ರೀಮಿಯಾರ್ ಲೀಗ್ ಸೀಸನ್ 02
ಶ್ರೀ ಮಲೈ ವಾರಿಯರ್ಸ್ ಚಾಂಪಿಯನ್.
ಹನೂರು TV10 ಕನ್ನಡ
18/01/2026
ಹನೂರು :ತಾಲೂಕಿನ ಸೂಳೆರಿಪಾಳ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಚಳ್ಳಿ ಗ್ರಾಮದ ವತಿಯಿಂದ ಆಯೋಜಿಸಿದ್ದ ಕಾಂಚಳ್ಳಿ ಪ್ರೈಮಯರ್ ಲೀಗ್ ಸೀಸನ್ 02 ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ತಂಡದ ಮಾಲೀಕರು ಚಾಲನೆ ನೀಡಿದರು.
ನಂತರ ಮಲೈ ವಾರಿಯರ್ಸ್ ತಂಡದ ಮಾಲೀಕ ರವಿ ಮಾತನಾಡಿ ಕಾಂಚಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕಾಂಚಳ್ಳಿ ಪ್ರೈಮಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತದೆ. ಇಲ್ಲಿ ಯಾವುದೇ ಜಾತಿ ಬೇಧ ಬಾವವಿಲ್ಲದೆ ಎಲ್ಲರೂ ಒಗ್ಗಟ್ಟಾಗಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾರೆ. ಕಾಂಚಳ್ಳಿ ಗ್ರಾಮದ ಎಲ್ಲ ಸಮುದಾಯದ ಯುವಕರು ಈ ಪಂದ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ.
ಬಹುಮಾನ ಪಡೆದ ತಂಡಗಳು:ಎರಡು ದಿನಗಳಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಶ್ರೀ ಮಲೈ ವಾರಿಯರ್ಸ್ (ಟ್ರೋಫಿ ಜೊತೆ ನಗದು),
ದ್ವಿತೀಯ ಬಹುಮಾನ ಲೋಕಲ್ ಹಂಟರ್ಸ್(ಟ್ರೋಫಿ ಜೊತೆ ನಗದು) ಪಡೆದರು.ಹಲವು ಕ್ರೀಡಾಪಟುಗಳು ಬೆಸ್ಟ್ ಬ್ಯಾಟ್ಸಮನ್, ಬೆಸ್ಟ್ ಬೌಲರ್, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಇದೇ ಸಂದರ್ಭದಲ್ಲಿ ತಂಡದ ಮಾಲೀಕರಾದ ಗೋವಿಂದರಾಜು, ಮುತ್ತುರಾಜು, ಡಿ ಕೆ ಶ್ರೀನಿವಾಸ್,ಮುರುಗೇಶ್, ಬಸವರಾಜು, ತಂಡದ ಕ್ಯಾಪ್ಟನ್ ಗಳಾದ ಶ್ರೀನಿವಾಸ್, ರಂಗಸ್ವಾಮಿ, ಪ್ರವೀಣ್ ಕುಮಾರ್,ಪ್ರದೀಪ್ ಕುಮಾರ್ ಪಿ, ನಾಲ್ಕು ತಂಡದ ಕ್ರೀಡಾಪಟು ಗಳು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ವರದಿ :ವಿಜಯ್ ಕುಮಾರ್ ಕಾಂಚಳ್ಳಿ
