ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…
- TV10 Kannada Exclusive
- January 22, 2026
- No Comment
- 1

ಅಯೋಧ್ಯಾ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ…ಎರಡನೇ ವರ್ಷದ ಸಂಭ್ರಮಾಚರಣೆ…
ಮೈಸೂರು,ಜ22,Tv10 ಕನ್ನಡ
ಅಯೋಧ್ಯೆಯ ಭವ್ಯ ಮಂದಿರದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆಯಾಗಿ ಎರಡು ವರ್ಷಗಳು ಪೂರೈಸಿದ ಐತಿಹಾಸಿಕ ಸಂದರ್ಭವನ್ನು ಶ್ರೀರಾಮ ಗೆಳೆಯರ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಪು ವೃತ್ತದಲ್ಲಿ ಸಡಗರ ಮತ್ತು ಭಕ್ತಿಭಾವದಿಂದ ಆಚರಿಸಲಾಯಿತು. ಶ್ರೀರಾಮನ ಭವ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಣೆ ಮಾಡಲಾಯಿತು. ಶತಮಾನಗಳ ಕಾಯುವಿಕೆಯ ನಂತರ ನನಸಾದ ಅಯೋಧ್ಯಾ ರಾಮ ಮಂದಿರದ ಕನಸು ಮತ್ತು ಈ ಎರಡು ವರ್ಷಗಳ ಪಯಣವನ್ನು ಸ್ಮರಿಸುತ್ತಾ “ಜೈ ಶ್ರೀರಾಮ್” ಘೋಷಣೆಗಳೊಂದಿಗೆ ಭಕ್ತರು ಸಂಭ್ರಮಿಸಿದರು.ಪೂಜಾ ಕಾರ್ಯಕ್ರಮದ ನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಗೋಪಾಲ ರಾಜೇ ಅರಸ್, ಬಿಜೆಪಿ ಮುಖಂಡರಾದ ಜೋಗಿ ಮಂಜು, ಬಳಗದ ಅಧ್ಯಕ್ಷರಾದ ಸಂದೀಪ್ ಚಂದ್ರಶೇಖರ್, ಮುಖಂಡರಾದ ಬಸವರಾಜ, ಕಿರಣ್, ಮೋಹನ್, ಮಲ್ಲೇಶ್, ಕುಶಾಲ್, ಮಹೇಶ್ ಅರಸ್, ಭಾನು, ಶೇಖರ್, ಶಿವಪ್ರಸಾದ್, ರಾಘವೇಂದ್ರ, ರಘು ರಾಮ್ ಅರಸ್, ಪ್ರಭುಶಂಕರ್, ಅಜ್ಗರ್, ಸುರೇಶ್, ಕುಮಾರ್, ರಾಜೇಂದ್ರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು…