ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ…
- CrimeTV10 Kannada Exclusive
- November 8, 2026
- No Comment
- 15

ಯುವಕ ಅನುಮಾನಾಸ್ಪದ ಸಾವು…ಪ್ರವಾಸೋದ್ಯಮ ಗೆಸ್ಟ್ ಹೌಸ್ ನಲ್ಲಿ ಮೃತದೇಹ ಪತ್ತೆ…
ಮಳವಳ್ಳಿ,ನ8,Tv10 ಕನ್ನಡ
ಮಳವಳ್ಳಿ ತಾಲೂಕು ಮುತ್ತತ್ತಿಯ ಪ್ರವಾಸೋದ್ಯಮ ಇಲಾಖೆ ಗೆಸ್ಟ್ ಹೌಸ್ ಕೊಠಡಿಯಲ್ಲಿ ಯುವಕ ಅನುಮಾನಾಸ್ಪದ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.ಇಬ್ಬರು ಸ್ನೇಹಿತರೊಂದಿಗೆ
ಪ್ರವಾಸಕ್ಕೆ ತೆರಳಿದ್ದ ಯುವಕ ರೂಮ್ನಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ಹಾರೋಹಳ್ಳಿಯ ಅವಿನಾಶ್ (24) ಮೃತ ಯುವಕ.
ಜೊತೆಯಲ್ಲಿದ್ದ ಇಬ್ಬರು ಸ್ನೇಹಿತರು ನಾಪತ್ತೆಯಾಗಿದ್ದಾರೆ.
ಅವಿನಾಶ್ ಸಾವು ಕೊಲೆಯೋ? ಆತ್ಮಹತ್ಯೆಯೋ? ಎಂಬ ಶಂಕೆ ವ್ಯಕ್ತವಾಗಿದೆ.
ಆಟೋದಲ್ಲಿ ಮೂವರು ಗೆಳೆಯರು ಮುತ್ತತ್ತಿಗೆ ಬಂದಿದ್ದರು.
ರಾತ್ರಿ ಊಟ ಮಾಡಿ ಮಲಗಿದ್ದ ಯುವಕ ಮೃತಪಟ್ಟಿದ್ದಾನೆ.
ಗೆಳೆಯನ ಶವ ಬಿಟ್ಟು ಇಬ್ಬರು ಸ್ನೇಹಿತರು ಎಸ್ಕೇಪ್ ಆಗಿದ್ದಾರೆ.
ತಂದೆ ಲೋಕೇಶ್ ದೂರಿನನ್ವಯ ಹಲಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…