ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು…

  • Crime
  • October 23, 2026
  • No Comment
  • 8

ಡಿಜಿಟಲ್ ಅರೆಸ್ಟ್ ಭೀತಿ…ನಿವೃತ್ತ ಅಧಿಕಾರಿಗೆ 1.64 ಕೋಟಿ ಪಂಗನಾಮ…
ಸೆನ್ ಪೊಲೀಸ್ ಠಾಣೆಯಲ್ಲಿ FIR ದಾಖಲು…

ಮೈಸೂರು,ಅ23,Tv10 ಕನ್ನಡ

ನಿಮ್ಮ ಮೊಬೈಲ್ ನಲ್ಲಿ ಮಕ್ಕಳ ಅಶ್ಲೀಲ ಫೋಟೋ ಹಾಗೂ ವಿಡಿಯೋಗಳು ಶೇರ್ ಆಗಿದೆ ಹಾಗೂ ನಿಮ್ಮ ಖಾತೆಯಿಂದ ಕೋಟ್ಯಾಂತರ ಹಣ ಅಕ್ರಮವಾಗಿ ವರ್ಗಾವಣೆ ಆಗಿರುವುದಾಗಿ ನಂಬಿಸಿದ ವಂಚಕ ಮೈಸೂರಿನ ನಿವೃತ್ತ ಅಧಿಕಾರಿಗೆ 1,63,66,000/- ರೂ ವಂಚಿಸಿದ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ರಾಮಕೃಷ್ಣ ನಗರದ ನಿವಾಸಿ ನಿವೃತ್ತ ಅಧಿಕಾರಿ ಶಾಲಿನಿ(64) ಎಂಬುವರೇ ವಂಚನೆಗೆ ಒಳಗಾದವರು.10/9/26 ರಿಂದ 9/10/26 ರ ವರೆಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ.ಮೊದಲು ಇಡಿ ಅಧಿಕಾರಿಯಾಗಿ ಮೊಬೈಲ್ ನಲ್ಲಿ ಮಾತನಾಡಿದ್ದಾನೆ.ಪೊಲೀಸ್ ಸಮವಸ್ತ್ರದಲ್ಲಿ ವಿಡಿಯೋ ಕಾಲ್ ಮೂಲಕ ಕಾಣಿಸಿಕೊಂಡ ವಂಚಕ ನಳಿನಿ ಹೆಸರಿನಲ್ಲಿದ್ದ ಡೆಬಿಟ್ ಕಾರ್ಡ್ ತೋರಿಸಿ ಕೋಟ್ಯಾಂತರ ಹಣ ನಿಮ್ಮ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಆಗಿದೆ ಎಂದು ನಂಬಿಸಿ ನಿಮ್ಮ ಖಾತೆ ಪರಿಶೀಲನೆ ಮಾಡಬೇಕೆಂದು ಬೆದರಿಸಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.ಕೆಲವು ದಿನಗಳ ನಂತರ ಹಣ ತಮ್ಮ ಖಾತೆಗೆ ವಾಪಸ್ ವರ್ಗಾವಣೆ ಆಗದ ಹಿನ್ನಲೆ ತಾವು ಮೋಸ ಹೋಗಿರುವುದು ಖಚಿತವಾಗಿದೆ.ಈ ಬಗ್ಗೆ ನಳಿನಿ ರವರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ…

ಎಣ್ಣೆ ಬಿಲ್ ವಿಚಾರದಲ್ಲಿ ಕಿರಿಕ್…ಓರ್ವನ ಕೊಲೆಯಲ್ಲಿ ಅಂತ್ಯ… ಮೈಸೂರು,ಅ19,Tv10 ಕನ್ನಡ ಕುಡಿದ ನಂತರ ಬಿಲ್ ಪಾವತಿಸುವ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಕೊ* ಯಲ್ಲಿ ಅಂತ್ಯವಾಗಿದೆ.ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್…
ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ..

ಬೆಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ…ಕಾಮುಕನಿಗೆ ಶಿಕ್ಷೆ ಪ್ರಕಟ.. ಮೈಸೂರು,ಅ15,Tv10 ಕನ್ನಡ ಬಲೂನ್ ಮಾರುವ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನಲೆ ಕಾಮುಕನಿಗೆ ಶಿಕ್ಷೆ ಪ್ರಕಟವಾಗಿದೆ.ಮೈಸೂರು…

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್

ದಸರಾ ವೇಳೆ ಅನಾಹುತ ಬೆದರಿಕೆ…ಅನಾಮಧೇಯ ವ್ಯಕ್ತಿಯಿಂದ ಪೋಸ್ಟ್ ಮೈಸೂರು,ಅ13,Tv10 ಕನ್ನಡ ದಸರಾ ವೇಳೆ ಅನಾಹುತ ಸೃಷ್ಠಿಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಸಂದೇಶ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.ಈ…

Leave a Reply

Your email address will not be published. Required fields are marked *