- July 26, 2022
ಮರೆತು ಹೋಗಿದ್ದ ಲ್ಯಾಪ್ ಟಾಪ್,ಟ್ಯಾಬ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ..

ಆಟೋದಲ್ಲಿ ಮರೆತುಹೋಗಿದ್ದ ಬೆಲೆ ಬಾಳುವ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ಗಳನ್ನ ಮಾಲೀಕರಿಗೆ ಹಿಂದಿರುಗಿಸಿದ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾರೆ.ಜಯಪುರ ಹೋಬಳಿ ನಿವಾಸಿ ನಂಜುಂಡಸ್ವಾಮಿ ಪ್ರಾಮಾಣಿಕತೆ ಮೆರೆದ ಆಟೋಚಾಲಕ.ಮೈಸೂರಿನ ಗಂಗೋತ್ರಿ ಬಡಾವಣೆಯ ವಿಜಯಾನಂದ್ ಎಂಬುವರು ಬಸ್ ಸ್ಟಾಂಡ್ ಗೆ ನಂಜುಂಡಸ್ವಾಮಿ ರವರ ಆಟೋದಲ್ಲಿ ಬಂದಿದ್ದಾರೆ.ಬಸ್ ಹಿಡಿಯುವ ಆತುರದಲ್ಲಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ಮರೆತು ಹೋಗಿದ್ದಾರೆ.ಇದನ್ನ ಮನಗಂಡ ನಂಜುಂಡಸ್ವಾಮಿ ಬ್ಯಾಗ್ ಸಮೇತ ಲಷ್ಕರ್ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.ಇದೇ ವೇಳೆ ದೂರು ನೀಡಲು ವಿಜಯಾನಂದ್ ಸಹ ಬಂದಿದ್ದಾರೆ.ಠಾಣೆಯ ಇನ್ಸ್ಪೆಕ್ಟರ್ ಸಂತೋಷ್ ರವರು ಕೂಲಂಕುಶವಾಗಿ ಪರಿಶೀಲನೆ ನಡೆಸಿ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ನ್ನ ದೇವರಾಜ ವಿಭಾಗದ ಎಸಿಪಿ ಶಶಿಧರ್ ರವರ ಸಮ್ಮುಖದಲ್ಲಿ ಹಸ್ತಾಂತರಿಸಿದ್ದಾರೆ.ಆಟೋ ಚಾಲಕನ ಪ್ರಾಮಾಣಿಕತೆಯನ್ನ ಎಸಿಪಿ ಶಶಿಧರ್ ಪ್ರಶಂಸಿಸಿದ್ದಾರೆ…