ಅವ್ಯವಸ್ಥೆಯ ಗೂಡಾದ ಆರೋಗ್ಯ ತಪಾಸಣಾ ಶಿಬಿರ…ಶಾಸಕ ಅನಿಲ್ ಚಿಕ್ಕಮಾದು ಗರಂ..
- MysorePoliticsTV10 Kannada Exclusive
- July 26, 2022
- No Comment
- 378
ಹೆಚ್.ಡಿ.ಕೋಟೆ,ಜುಲೈ25,Tv10 ಕನ್ನಡ
ಹೆಚ್.ಡಿ.ಕೋಟೆಯಲ್ಲಿಂದು ಆಯೋಜಿಸಲಾಗಿದ್ದ ವಿಶೇಷ ಚೇತನರ ಹಾಗೂ ಹಿರಿಯ ನಾಗರೀಕರ ಆರೋಗ್ಯ ತಪಾಸಣಾ ಶಿಬಿರ ಅವ್ಯವಸ್ಥೆಗಳ ಅಗರವಾಯಿತು.
ತಾಲೂಕಿನ ಶಾಸಕ ಅ
ಎಸ್.ಅನಿಲ್ ಚಿಕ್ಕಮಾದು ಅವರ ಗಮನಕ್ಕೂ ತಾರದೆ ಆಯೋಜಿಸಿದ ಶಿಬಿರ ಗೊಂದಲದಚಗೂಡಾಯಿತು.ಅವ್ಯವಸ್ಥೆಗಳಿಗೆ ಖುದ್ದು ಸಾಕ್ಷಿಯಾದ ಅನಿಲ್ ಚಿಕ್ಕಮಾದು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.
ಎಚ್.ಡಿ.ಕೋಟೆ ತಾಲೋಕಿನ 26ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿಶೇಷ ಚೇತನರು ರುತ್ತು ಹಿರಿಯ ನಾಗರಿಕರಿಗಾಗಿ ಶಿಬಿರ ಅಯೋಜಿಸಲಾಗಿತ್ತು.
ಸಾಧನ ಸಲಕರಣೆ ಸೌಲಭ್ಯ ಒದಗಿಸುವ ಕಾರ್ಯಕ್ರಮವೂ ಶಿಬಿರದ ಒಂದು ಭಾಗವಾಗಿತ್ತು.ಹೆಚ್.ಡಿ.ಕೋಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ
ಆಯೋಜಿಸಲಾಗಿತ್ತು.ಆದ್ರೆ ಸೌಲಭ್ಯ ಒದಗಿಸದೆ ಅಧಿಕಾರಿಗಳು ಆಕ್ರೋಷಕ್ಕೆ ತುತ್ತಾದರು.
ಇಕ್ಕಟ್ಟಾದ ಶಾಲೆಯಲ್ಲಿ ಕುಡಿಯುವ ನೀರು, ಶೌಚಾಲಯ, ಸಮರ್ಪಕ ಆಸನಗಳ ವ್ಯವಸ್ಥೆ ಇರಲಿಲ್ಲ.
ಆಸನಗಳಿಲ್ಲದೇ ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರು ನೆಲದಲ್ಲೇ ಕುಳಿತರು.ಇದೇ ವೇಳೆ ಆಗಮಿಸಿದ ಶಾಸಕ ಅನಿಲ್ ಚಿಕ್ಕಮಾದು ಅವ್ಯವಸ್ಥೆ ಕಂಡು ಕಿಡಿ ಕಾರಿದರು.ಜಿಲ್ಲಾ ವಿಶೇಷ ಚೇತನರ ಇಲಾಖೆ ಉಪನಿರ್ದೇಶಕಿ ಮಾಲೀನಿ ಸೇರಿದಂತೆ ತಾಲೋಕು ಅಧಿಕಾರಿಗಳಿಗೆ ಶಾಸಕ ಚಳಿ ಬಿಡಿಸಿದರು. ಶಿಬಿರ ರದ್ದುಗೊಳಿಸಲು ಪಟ್ಟು ಹಿಡಿದರೂ ಬಳಿಕ ವಿಶೇಷ ಚೇತನರು ಹಿರಿಯ ನಾಗರೀಕರ ಅನುಕೂಲದ ಹಿನ್ನಲೆ ನಡೆಸಲು ಸಮ್ಮತಿಸಿದರು.
ವಿಶೇಚ ಚೇತನರನ್ನ ಸಾಗಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳದ ಇಲಾಖಾ ಸಿಬ್ಬಂಧಿಗಳ ಬಗ್ಗೆ ಆಕ್ರೋಷ ವ್ಯಕ್ತವಾಯಿತು.ಒಟ್ಟಾರೆ ಅವ್ಯವಸ್ಥೆಯಲ್ಲೇ ವಿಶೇಷ ಚೇತನರು ಮತ್ತು ಹಿರಿಯ ನಾಗರೀಕರು ತಪಾಸಣೆಗೆ ಒಳಗಾದರು…