ಬೇಬಿ ಬೆಟ್ಟ ಟ್ರಯಲ್ ಬ್ಲಾಸ್ಟ್ ವಿವಾದ…ಸರ್ಕಾರದ ವಿರುದ್ದ ಕಿಡಿಕಾರಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್…

  • Mysore
  • July 26, 2022
  • No Comment
  • 268

ಬೇಬಿ ಬೆಟ್ಟದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್ ಬಗ್ಗೆ ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇಂದು ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ದ ಕಿಡಿ ಕಾರಿದರು. ಯಾಕಿಷ್ಟು ಹಿಂಸೆ ಕೊಡುತ್ತಿದ್ದಾರೋ ಗೊತ್ತಿಲ್ಲ ಎಂದು ಅಳಲು ತೋಡಿಕೊಂಡರು.
ರಾಜ್ಯ ವಿಲೀನ ಸಂದರ್ಭದಲ್ಲಿ ಭಾರತ ಸರ್ಕಾರ ಮತ್ತು ರಾಜವಂಶದ ನಡುವೆ ಒಪ್ಪಂದ ಏರ್ಪಟ್ಟಿತ್ತು.
ರಾಜ ಮನೆತನ ಖಾಸಗಿ ಆಸ್ತಿಗಳನ್ನು ಘೋಷಿಸಿಕೊಂಡು ಇನ್ನುಳಿದ ಎಲ್ಲಾ ಆಸ್ತಿಗಳನ್ನು ದೇಶದೊಂದಿಗೆ ವಿಲೀನ ಮಾಡಿದರು.ಈ ಸಂಬಂಧ 1950ರಲ್ಲಿ ಕೇಂದ್ರ ಸರ್ಕಾರ ಮತ್ತು ರಾಜವಂಶಸ್ಥ ನಡುವೆ ಒಪ್ಪಂದ ಏರ್ಪಟ್ಟಿದೆ.
ಇದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆದೇಶದ ಮೂಲಕ ಖಚಿತ ಪಡಿಸಲಾಗಿದೆ.
ಈ ಸಂಬಂಧ ಸರ್ಕಾರದಲ್ಲೂ ದಾಖಲೆಗಳಿವೆ.
ಯಾವುದು ನಮ್ಮ ಖಾಸಗಿ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ.
ಬೇಬಿ ಬೆಟ್ಟ ಸುತ್ತಲಿನ 1623 ಎಕರೆ ನಮ್ಮ ಖಾಸಗಿ ಆಸ್ತಿ.
ಅಧಿಕಾರಿಗಳು ಅದನ್ನು ಬಿ ಖರಾಬು ಎಂದು ಘೋಷಿಸಿದರು.ಅದರ ಪರಿಣಾಮವಾಗಿ ಗಾಣಿಗಾರಿಕೆ ಚಟುವಟಿಕೆ ಪ್ರಾರಂಭವಾಯಿತು.
ಈಗ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ.
ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು.
ಎಲ್ಲ ಗೊತ್ತಿದ್ದು ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ನೀವು ವಿಜ್ಞಾನಿಗಳು.
ಎಲ್ಲಿ ಬ್ಲಾಸ್ಟ್ ಮಾಡಿದರೆ ಎಷ್ಟು ದೂರದವರೆಗೆ ಪರಿಣಾಮ ಉಂಟಾಗುತ್ತದೆ ಎಂಬುದು ನಿಮಗೆ ಗೊತ್ತಿರಬೇಕು. ಒಂದು ವೇಳೆ ಪ್ರಯೋಗ ಮಾಡಲೇಬೇಕು ಎಂದಾದರೆ ಬೇರಾವುದೋ ಸರ್ಕಾರಿ ಜಾಗದಲ್ಲಿ ಮಾಡಿ.ಮಂಡ್ಯ ಜಿಲ್ಲಾಡಳಿತಕ್ಕೆ ರಾಜವಂಸಸ್ಥೆ ಪ್ರಮೋದಾದೇವಿ ಒಡೆಯರ್ ಸಲಹೆ ನೀಡಿದರು.
ಬೇಬಿ ಬೆಟ್ಟದಲ್ಲೇ ಟ್ರಯಲ್ ಮಾಡಬೇಕು ಅಂತೇನೂ ಇಲ್ಲ.
ವಿಜ್ಞಾನ ಎಲ್ಲ ಕಡೆಗೂ ಒಂದೇ.ಆದ್ದರಿಂದ ಬೇರೆ ಪ್ರದೇಶದಲ್ಲೂ ಟ್ರಯಲ್ ಮಾಡಬಹುದು.
ನಾನು ಪರ ಅಥವಾ ವಿರೋಧ ಅಂತ ಮಾತನಾಡುವುದಿಲ್ಲ.
ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂಬುದು ನಮ್ಮ ವಾದ. ಮುಂದೆ ಅದನ್ನು ನಮ್ಮ ಹೆಸರಿಗೆ ಖಾತೆ ಮಾಡಿದರೆ ಗಣಿಗಾರಿಕೆ ಮಾಡುವುದಿಲ್ಲ. ಅಲ್ಲಿ ಗಣಿಗಾರಿಕೆ ಮಾಡಲು ಏನೂ ಉಳಿದಿಲ್ಲ.
ಪ್ರತಿಭಟನೆ ಜಾಗಕ್ಕೆ ನಾನು ಹೋಗುವುದಿಲ್ಲ.
ಇಬ್ಬರ ನಡುವೆ ನಾನು ಮಧ್ಯಕ್ಕೆ ಹೋಗುವುದರಿಂದ ಏನೇನೋ ಆಗಬಹುದು.
ಅದ್ಯಾವುದೂ ನನಗೆ ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು…

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *