- July 29, 2022
ಮಹಿಳೆ ಬರ್ಬರ ಕೊಲೆ…ಅಕ್ರಮ ಸಂಭಂಧ ಶಂಕೆ…ಆರೋಪಿ ಪರಾರಿ…
ಮಹಿಳೆ ಬರ್ಬರ ಕೊಲೆ…ಅಕ್ರಮ ಸಂಭಂಧ ಶಂಕೆ…ಆರೋಪಿ ಪರಾರಿ…
ನಂಜನಗೂಡು,ಜುಲೈ29,Tv10 ಕನ್ನಡ
ಮೈಸೂರು ಜಿಲ್ಲೆಯಲ್ಲಿ ಮಹಿಳೆ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.
ಮಿಣುಕಮ್ಮ( 45) ಕೊಲೆಯಾದ ಮಹಿಳೆ.
ನಂಜನಗೂಡು ತಾಲ್ಲೂಕು ಹಳೇಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಅದೇ ಗ್ರಾಮದ ಮಹದೇವನಾಯಕ ಕೊಲೆ ಮಾಡಿರುವ ಆರೋಪಿ.ಇಂದು ಬೆಳಿಗ್ಗೆ ಹಾಲು ತರಲು ಮಿಣುಕಮ್ಮ ಹೊರಗಡೆ ಬಂದಾಗ ಕೊಲೆ ಮಾಡಲಾಗಿದೆ.
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಮಹದೇವನಾಯಕ ಪರಾರಿಯಾಗಿದ್ದಾನೆ.ಮಿಣುಕಮ್ಮ ಹಾಗೂ ಮಹದೇವನಾಯಕ ನಡುವೆ ಅಕ್ರಮ ಸಂಭಂಧ ಇತ್ತು ಎಂದು ಹೇಳಲಾಗಿದೆ.ಇತ್ತೀಚೆಗರ ಮತ್ತೋರ್ವನ ಜೊತೆ ಮಿಣುಕಮ್ಮ ಸಂಭಂಧ ಬೆಳೆಸಿದ್ದಳೆಂದು ಹೇಳಲಾಗಿದೆ.ಈ ಹಿನ್ನಲೆ ಇಂದು ಬೆಳಿಗ್ಗೆ ಮಹದೇವನಾಯಕ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…