ಕರುನಾಡ ರಕ್ಷಣಾ ವೇದಿಕೆ ಹೋರಾಟಕ್ಕೆ ಮಾತ್ರವಲ್ಲ ಸಮಾಜ ಸೇವೆಗೂ ಸದಾಸಿದ್ದ ಜಿಲ್ಲಾ ಉಸ್ತುವಾರಿ ಚಂದನ್ ಗೌಡ
- TV10 Kannada Exclusive
- July 30, 2022
- No Comment
- 147
ಕರುನಾಡ ರಕ್ಷಣಾ ವೇದಿಕೆ ಹೋರಾಟಕ್ಕೆ ಮಾತ್ರವಲ್ಲ ಸಮಾಜ ಸೇವೆಗೂ ಸದಾಸಿದ್ದ ಜಿಲ್ಲಾ ಉಸ್ತುವಾರಿ ಚಂದನ್ ಗೌಡ
ಹಾಸನ : ಆಲೂರು ತಾಲ್ಲೂಕಿನ ಸ. ಕಿ. ಪ್ರಾ. ಶಾಲೆ ಗೇಕರವಳ್ಳಿಯಲ್ಲಿ ಕರುನಾಡ ರಕ್ಷಣಾವೇದಿಕೆ ಹಾಸನ ಜಿಲ್ಲಾ ಘಟಕದ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಲಾಯಿತು
ನಂತರ ವೇದಿಕೆಯ ಜಿಲ್ಲಾ ಉಸ್ತುವಾರಿ ಚಂದನ್ ಗೌಡ ಮಾತನಾಡಿ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ನಮ್ಮ ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆಏಕೆಂದರೆ ಕನ್ನಡ ಶಾಲೆಗಳು ಅಳಿವು ಉಳಿವಿನಂಚಲಿದೆ ಆದ್ದರಿಂದ ಕನ್ನಡ ಶಾಲೆಯನ್ನು ಕನ್ನಡವನ್ನು ಬೆಳೆಸುವುದು ನಮ್ಮ ಕರ್ತವ್ಯವೆಂದರು . ಈಗಾಗಲೇ ಕರುನಾಡ ರಕ್ಷಣಾ ವೇದಿಕೆಯು ಪ್ರತಿ ಹಳ್ಳಿಮಕ್ಕಳನ್ನು ಗುರುತಿಸಿ ಮಕ್ಕಳಿಗೆ ನಮ್ಮ ಕೈಲಾದ ಚಿಕ್ಕ ಅಳಿಲು ಸೇವೆಯನ್ನು ಮಾಡುತಿದ್ದೇವೆ .ಅದಲ್ಲದೇ ಈಗಾಗಲೇ ಜಿಲ್ಲೆಯ ಹಲವಾರು ಶಾಲೆಗಳಿಗೆ ನೋಟ್ ಬುಕ್ ಹಾಗೂ ಪೆನ್ನು ನೀಡುತ್ತಿದ್ದು ಮುಂದೆಯು ಕೂಡ ಅನೇಕ ಶಾಲೆಗಳಲ್ಲಿ ಈ ಅಭಿಯಾನದ ಕೆಲಸಗಳನ್ನು ಮಾಡಿ ಸಮಾಜಮುಖಿ ಕೆಲಸಗಳಲ್ಲಿ ಕರುನಾಡ ರಕ್ಷಣಾ ವೇದಿಕೆ ತೊಡಗಿಸಿಕೊಳ್ಳುತ್ತದೆ ಎಂದರು. .
ಕರುನಾಡ ರಕ್ಷಣಾ ವೇದಿಕೆಯ ಉದ್ದೇಶವೇನೆಂದರೆ ಕೇವಲ ಹೋರಾಟಕ್ಕೆ ಸೀಮಿತವಲ್ಲ ಕನ್ನಡ ಶಾಲೆಯನ್ನು ಉಳಿಸುವುದರ ಜೋತೆಗೆ ಸಮಾಜ ಸೇವೆಗೂ ಸದಾಸಿದ್ದವೆಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮನು.ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ನಟರಾಜ್ .ಉಪಾಧ್ಯಕ್ಚರಾದ ಮನೋಹರ್ ಮತ್ತು ಗೇಕರವಳ್ಳಿ ಶಾಲಾ ಮುಕ್ಯೋಪಾಧ್ಯಾಯೇ ಹಾಗೂ ಶಿಕ್ಷಕಿ ಲೀಲಾವತಿ ಹಾಗೂ ಮಕ್ಕಳಿದ್ದರು.