ಡಿಡಿಎಲ್ ಆರ್ ಸರ್ವೆಯರ್ ಎಸಿಬಿ ಬಲೆಗೆ…ಜಮೀನು ಪೋಡಿ ಮಾಡಿಕೊಡಲು 35 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲಾಕ್…
- CrimeTV10 Kannada Exclusive
- July 30, 2022
- No Comment
- 431
ಡಿಡಿಎಲ್ ಆರ್ ಸರ್ವೆಯರ್ ಎಸಿಬಿ ಬಲೆಗೆ…ಜಮೀನು ಪೋಡಿ ಮಾಡಿಕೊಡಲು 35 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲಾಕ್…
ಮೈಸೂರು,ಜುಲೈ30,Tv10 ಕನ್ನಡ
ಜಮೀನಿಗೆ ಸಂಭಂಧಪಟ್ಟಂತೆ ಹಳೇ ಪೋಡಿ ರದ್ದುಪಡಿಸಿ ಅನುಭವದಲ್ಲಿರುವ ಪೋಡಿ ಮಾಡಿಕೊಡಲು ರೈತರೊಬ್ಬರ ಬಳಿ 35 ಸಾವಿರ ಲಂಚ ಪಡೆಯುತ್ತಿದ್ದ ಡಿಡಿಎಲ್ ಆರ್ ಸರ್ವೆಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.35 ಸಾವಿರ ಲಂಚ ಪಡೆಯವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಸರ್ವೆಯರ್ ಮಂಜುನಾಥ್ ರನ್ನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ಪಿರಿಯಾಪಟ್ಟಣದ ರಾವಂದೂರು ಗ್ರಾಮದ ರೈತರೊಬ್ಬರು ತಮ್ಮ ಜಮೀನಿಗೆ ಹೊಸ ಪೋಡಿ ಮಾಡಲು ಜಿಲ್ಲಾಧಿಕಾರಿಗಳ ಕಚೇರಿ ತಾಂತ್ರಿಕ ಸಹಾಯಕರು ಪದನಿಮಿತ್ತ ಉಪನಿರ್ದೇಶಕ ನ್ಯಾಯಾಲಯಕ್ಕೆ ಅರ್ಜಿಸಲ್ಲಿಸಿದ್ದರು.ಪೋಡಿ ಕೆಲಸ ಮಾಡಲು ಸರ್ವೆಯರ್ ಮಂಜುನಾಥ್ 35 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.ಇದರಿಂದ ಬೇಸತ್ತ ರೈತರು ಮೈಸೂರು ಎಸಿಬಿ ಠಾಣೆಗೆ ದೂರು ನೀಡಿದ್ದರು.ಭ್ರಷ್ಟ ಸರ್ವೆಯರ್ ನ ರೆಡ್ ಹ್ಯಾಂಡಾಗಿ ಹಿಡಿಯಲು ಮೈಸೂರು ಎಸಿಬಿ ಟ್ರಾಪ್ ಸಿದ್ದಪಡಿಸಿತ್ತು.ಎಸ್ಪಿ ಸಜೀತ್ ವಿ.ಜೆ.ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಧರ್ಮೇಂದ್ರ ರವರ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದಾಗ ಸರ್ವೆಯರ್ ಮಂಜುನಾಥ್ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಮೈಸೂರು-ಬನ್ನೂರು ರಸ್ತೆಯ ಡಿ.ಎಫ್.ಆರ್.ಎಲ್ ಬಳಿ ಹಣ ಪಡೆಯುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಮೇತ ಬಂಧಿಸಿದ್ದಾರೆ.ಆರೋಪಿ ಮಂಜುನಾಥ್ ವಿರುದ್ದ ಕ್ರಮ ಕೈಗೊಳ್ಳಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ…