ಮಗನ ಅಗಲಿಕೆಯಿಂದ ಮನನೊಂದ ತಾಯಿ ನೇಣಿಗೆ ಶರಣು…
- CrimeMysore
- July 30, 2022
- No Comment
- 284
ಮಗನ ಅಗಲಿಕೆಯಿಂದ ಮನನೊಂದ ತಾಯಿ ನೇಣಿಗೆ ಶರಣು…
ಮೈಸೂರು,ಜುಲೈ30,Tv10 ಕನ್ನಡ
ಮಗನ ಸಾವಿನಿಂದ ಮನನೊಂದ ತಾಯಿ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸಾತಗಳ್ಳಿ ಡಿ ಜೋನ್ ನಲ್ಲಿ ನಡೆದಿದೆ.ಭಾಗ್ಯಲಕ್ಷ್ಮಿ(65) ಮೃತ ದುರ್ದೈವಿ.ಕೋವಿಡ್ ಎರಡನೇ ವೇವ್ ನಲ್ಲಿ ಭಾಗ್ಯಲಕ್ಷ್ಮಿ ಪುತ್ರ ಉಮಾಶಂಕರ್ ಮೃತಪಟ್ಟಿದ್ದರು.ಶಿಕ್ಷಣ ಇಲಾಖೆಯಲ್ಲಿ ಎಫ್.ಡಿ.ಎ.ಆಗಿದ್ದ ಉಮಾಶಂಕರ್ ನಿಧನದಿಂದ ಭಾಗ್ಯಲಕ್ಷ್ಮಿ ಮನನೊಂದಿದ್ದರು.ಈ ಹಿನ್ನಲೆ ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆಂದು ಸೊಸೆ ಲಕ್ಷ್ಮಿ ದೂರು ನೀಡಿದ್ದಾರೆ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…