• July 30, 2022

ಒಂಟಿ ಜೀವನಕ್ಕೆ ಬೇಸತ್ತ ವೃದ್ದ ಆತ್ಮಹತ್ಯೆ…

ಒಂಟಿ ಜೀವನಕ್ಕೆ ಬೇಸತ್ತ ವೃದ್ದ ಆತ್ಮಹತ್ಯೆ…

ಒಂಟಿ ಜೀವನಕ್ಕೆ ಬೇಸತ್ತ ವೃದ್ದ ಆತ್ಮಹತ್ಯೆ…

ಮೈಸೂರು,ಜುಲೈ30,Tv10 ಕನ್ನಡ
ಎರಡು ಮದುವೆಯಾದರೂ ಒಂಟಿ ಜೀವನ ನಡೆಸುತ್ತಿದ್ದ ವೃದ್ದ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ.ಈರಪ್ಪ(65) ಮೃತ.ಕಳಲವಾಡಿ ರಸ್ತೆಯ ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ನಿರ್ಮಿಸಲಾದ ತಾತ್ಕಾಲಿಕ ಶೆಡ್ ಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೊದಲ ಪತ್ನಿಯಿಂದ ಬೇರೆಯಾಗಿ ಚಂದ್ರಮ್ಮ ಎಂಬುವರನ್ನ ಎರಡನೇ ವಿವಾಹವಾಗಿದ್ದ ಈರಪ್ಪ ಈಕೆಯಿಂದಲೂ ಬೇರೆಯಾಗಿ ಇತ್ತೀಚೆಗೆ ಒಂಟಿ ಜೀವನ ಸಾಗಿಸುತ್ತಿದ್ದ.ಇದರಿಂದ ಬೇಸತ್ತ ಈರಪ್ಪ ನೇಣಿಗೆ ಶರಣಾಗಿದ್ದಾನೆ.ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Leave a Reply

Your email address will not be published.