- July 31, 2022
ಶಿಕ್ಷಣ ಹಾಗೂಸಂಘಟನೆಯಿಂದ ಪ್ರಗತಿ: ಶಾಸಕ ನಾಗೇಂದ್ರ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನೆ

ಶಿಕ್ಷಣ ಹಾಗೂಸಂಘಟನೆಯಿಂದ ಪ್ರಗತಿ: ಶಾಸಕ ನಾಗೇಂದ್ರ. ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ಮಡಿವಾಳ ಮಾಚಿದೇವರ ಸಂಘದ ಉದ್ಘಾಟನೆ
ಮಡಿವಾಳ ಸಮುದಾಯ ಸೇರಿದಂತೆ ಹಿಂದುಳಿದ ಎಲ್ಲ ಕಾಯಕ ಸಮಾಜಗಳು ಶಿಕ್ಷಣ ಹಾಗೂ ಸಂಘಟನೆಯಿಂದ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಚಾಮರಾಜ ಕ್ಷೇತ್ರದ ಶಾಸಕ ನಾಗೇಂದ್ರ ಅವರು ಹೇಳಿದರು .ಮೈಸೂರಿನ ಬೃಂದಾವನ ಬಡಾವಣೆಯಲ್ಲಿ ವೀರ ಮಡಿವಾಳ ಮಾಚಿದೇವ ಸಂಘವನ್ನು ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಘಗಳ ಮೂಲಕ ಆಯಾ ಸಮುದಾಯವನ್ನು ಪ್ರಗತಿಯತ್ತ ಸಾಗಲು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸಗಳನ್ನು ಸಂಘಗಳು ಮಾಡಬೇಕು .ಈ ನಿಟ್ಟಿನಲ್ಲಿ ಚಾಮರಾಜ ಕ್ಷೇತ್ರದ ಶಾಸಕನಾದ ನನ್ನ ಕಚೇರಿ ಸದಾ ನಿಮ್ಮ ಸೇವೆಗಾಗಿ ಲಭ್ಯವಿರುತ್ತದೆ ಈಗಾಗಲೇ ಕುಕ್ಕರಲ್ಲಿ ಕೆರೆ ಮಡಿಕಟ್ಟೆ ಸೇರಿದಂತೆ ನಗರದ ಮಡಿವಾಳ ಬಂಧುಗಳಿಗೆ ಹಾಗೂ ಮಡಿವಾಳ ಸಮುದಾಯಕ್ಕೆ ಪ್ರಯೋಜನ ಕಲ್ಪಿಸಿದ್ದೇನೆ. ನಮ್ಮ ಸೇವೆಯನ್ನು ಇನ್ನಷ್ಟು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಡಿವಾಳರ ಸಂಘದ ನಂಜಪ್ಪ ಮಾತನಾಡಿ ಸ್ಥಳೀಯ ಸಂಘ ಸಂಸ್ಥೆಗಳು ಸಮುದಾಯಕ್ಕೆ ಪೂರಕವಾಗಿ ಕೆಲಸ ಮಾಡಬೇಕು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸಬೇಕು ರಾಜ್ಯದ ಮಡಿವಾಳ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ರಾಜ್ಯ ಸಂಘ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು. ಮಾಜಿ ಶಾಸಕರಾದ ವಾಸು ರವರು ಮಾತನಾಡಿ ಶಿಕ್ಷಣವೇ ಎಲ್ಲಾ ಸಮಸ್ಯೆಗೆ ಪರಿಹಾರ ಆದ್ದರಿಂದ ಮಡಿವಾಳ ಸಮುದಾಯದ ಪೋಷಕರು ಎಷ್ಟೇ ಕಷ್ಟ ಆದರೂ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಎಂದರು. ಪ್ರಾಥಮಿಕ ಭಾಷಣ ಮಾಡಿದ ಬೃಂದಾವನ ಬಡಾವಣೆ ಮಡಿವಾಳ ಮಾಚಿದೇವರ ಸಂಘದ ಸಂಘದ ಅಧ್ಯಕ್ಷ ಮಹೇಶ್ ಸಂಘಕ್ಕೆ ಎಲ್ಲ ರೀತಿಯ ಸಲಹೆ ಸಹಕಾರವನ್ನು ನೀಡಬೇಕೆಂದು ಶಾಸಕರನ್ನು ಹಾಗೂ ರಾಜ್ಯ ಅಧ್ಯಕ್ಷರನ್ನು ಕೋರಿದರು. ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯರಾದ ರಮೇಶ್, ದೇವರಾಜು, ರಾಜ್ಯ ಮಡಿವಾಳ ಸಂಘದ ನಿರ್ದೇಶಕ ರವಿಕುಮಾರ್, ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ರವಿನಂದನ ಹಾಗೂ ಜಿಲ್ಲಾ ಮುಖಂಡರುಗಳಾದ ಚಂದ್ರಶೇಖರ ಭೈರಿ ಕುರುಬೂರು ಮಾದೇವಸ್ವಾಮಿ ಧರ್ಮರಾಜು, ವೆಂಕಟೇಶ್, ನಾಗರಾಜು, ನಿವೃತ್ತ ಇಂಜಿನಿಯರ್ ಹರೀಶ್, ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಇದೇ ಸಂದರ್ಭ ಶಾಸಕ ನಾಗೇಂದ್ರ ಅವರು ನೂತನ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಿ ಉತ್ತಮ ಕೆಲಸ ನಿರ್ವಹಿಸುವಂತೆ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಬೃಂದಾವನ ಬಡಾವಣೆಯ ಮಾಜಿದೇವರ ಸಂಘದ ಗೌರವಾಧ್ಯಕ್ಷರಾದ ಪುಟ್ಟಸ್ವಾಮಿ, ಉಪಾಧ್ಯಕ್ಷ ನಾಗರಾಜು, ಕಾರ್ಯಧ್ಯಕ್ಷ ರಂಗರಾಜು ,ಪ್ರಧಾನ ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿ ರಂಗಸ್ವಾಮಿ, ಖಜಾಂಜಿ ಉಮೇಶ್, ಕಾರ್ಯದರ್ಶಿ ರುದ್ರ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ತಮ್ಮಣ್ಣ, ಲೆಕ್ಕ ಪರಿಶೋಧಕರಾದ ಶಿವಮಾದಶೆಟ್ಟಿ, ಸಂಸ್ಕೃತಿಕ ಕಾರ್ಯದರ್ಶಿ ಮಹದೇವ್, ನಿರ್ದೇಶಕರುಗಳಾದ ಗೋವಿಂದರಾಜು, ವೀರಭದ್ರ, ಕಾಳಶೆಟ್ಟಿ ಹಾಗೂ ಸುಂದರ ಸೇರಿದಂತೆ ಬೃಂದಾವನ ಬಡಾವಣೆ ಹಾಗೂ ಮೈಸೂರು ನಗರದ ನೂರಾರು ಮಡಿವಾಳ ಸಮಾಜದ ಮಹಿಳೆಯರು ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಮಹೇಶ್ ಸ್ವಾಗತಿಸಿದರು, ಉಪನ್ಯಾಶಕ ಶ್ರೀಧರ ಅವರ ನಿರೂಪಣೆ, ಜಿಲ್ಲಾ ಅಧ್ಯಕ್ಷರ ರವಿನಂದನಾ ರವರು ವಂದನಾರ್ಪಣೆ ಸಲ್ಲಿಸಿದರು.🤝🤝🤝🤝🤝🤝



