ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ…ಹುಟ್ಟುಹಬ್ಬಕ್ಕೆ ಕಲಾವಿದನ ಗಿಫ್ಟ್…
- TV10 Kannada Exclusive
- August 3, 2022
- No Comment
- 184
ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ…ಹುಟ್ಟುಹಬ್ಬಕ್ಕೆ ಕಲಾವಿದನ ಗಿಫ್ಟ್…

ಚಾಮರಾಜನಗರ,ಆಗಸ್ಟ್3,Tv10 ಕನ್ನಡ
ವಿಪಕ್ಷ ನಾಯಕ ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಅಮೃತಮಹೋತ್ಸವ ಸಂಧರ್ಭದಲ್ಲಿ
ಕಲಾವಿದ ಕೈಚಳಕದಲ್ಲಿ ವಿಶೇಷವಾಗಿ ಅರಳಿದ್ದಾರೆ.ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ ಅನ್ನರಾಮಯ್ಯ ಆಗಿದ್ದಾರೆ.
ಯಳಂದೂರು ತಾಲೂಕಿನ ಟಿ ಹೊಸೂರು ಗ್ರಾಮದ ಕಲಾವಿದ ಬಿ ಮಹೇಶ್ ಕೈಚಳಕದಲ್ಲಿ ಮೂಡಿ ಕಲಾಕೃತಿ ಮೂಡಿ ಬಂದಿದೆ.ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆದ ಮೊದಲ ದಿನವೇ ಘೋಷಣೆ ಮಾಡಿದ ಮಹತ್ವ ಪೂರ್ವ ಅನಾಭಾಗ್ಯ ಯೋಜನೆ ನೆನಪಿಸುವ ಕಲಾಕೃತಿ ಸುಂದರವಾಗಿ ಮೂಡಿಬಂದಿದೆ.
ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟು ಹಬ್ಬದ ಹಿನ್ನೆಲೆ ಅಭಿಮಾನಿಗಳು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಈ ಹಿನ್ನಲೆ ವಿಧವಿಧವಾದ ಉಡುಗೊರೆಗಳನ್ನ ಅಭಿಮಾನಿಗಳು ನೀಡುತ್ತಿದ್ದಾರೆ.ಚಾಮರಾಜನಗರದ ಮಹೇಶ್ಗಿ ಗಮನ ಸೆಳೆಯುತ್ತಿರುವ ಉಡುಗೊರೆ ನೀಡುತ್ತಿದ್ದಾರೆ. ಅಕ್ಕಿಯಲ್ಲೇ ತಯಾರಿಸಿದ ಅನ್ನ ರಾಮಯ್ಯ ಕಲಾಕೃತಿ ಆಕರ್ಷಿಸುತ್ತಿದೆ…