ಶಿಕ್ಷಕಿ ಕೊಲೆ ಪ್ರಕರಣ… ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ…6 ತಿಂಗಳ ನಂತರ ಆರೋಪಿಗಳು ಅಂದರ್…ಅಕ್ರಮ ಸಂಭಂಧಕ್ಕೆ ಬಲಿಯಾದ ಟೀಚರ್ …

ಶಿಕ್ಷಕಿ ಕೊಲೆ ಪ್ರಕರಣ… ನಗರಸಭೆ ಕೌನ್ಸಿಲರ್ ಸೇರಿ ನಾಲ್ವರ ಬಂಧನ…6 ತಿಂಗಳ ನಂತರ ಆರೋಪಿಗಳು ಅಂದರ್…ಅಕ್ರಮ ಸಂಭಂಧಕ್ಕೆ ಬಲಿಯಾದ ಟೀಚರ್ …

ನಂಜನಗೂಡು,ಆಗಸ್ಟ್3,Tv10 ಕನ್ನಡ
ಕೊನೆಗೂ ಹಿಂದಿ ಶಿಕ್ಷಕಿ ಕೊಲೆ ರಹಸ್ಯ ಭೇಧಿಸುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ.ನಂಜನಗೂಡು ನಗರಸಭೆ ಕೌನ್ಸಿಲರ್ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ.ಶಿಕ್ಷಕಿಯೊಂದಿಗೆ ಪತಿಯ ಅಕ್ರಮ ಸಂಭಂಧಕ್ಕೆ ಬೇಸತ್ತಿದ್ದ ಕೌನ್ಸಿಲರ್ ಸುಫಾರಿ ಕೊಟ್ಟು ಕೊಲೆ ಮಾಡಿಸಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.5 ನೇ ವಾರ್ಡಿನಿಂದ ನಗರಸಭೆಗೆ ಆಯ್ಕೆಯಾದ ಕೌನ್ಸಿಲರ್ ಗಾಯಿತ್ರಿ ಮುರುಗೇಶ್,ಭಾಗ್ಯ,ನಾಗಮ್ಮ ಮತ್ತು ಕುಮಾರ್ ಬಂಧಿತರು.ಘಟನೆ ನಡೆದು 6 ತಿಂಗಳ ನಂತರ ಆರೋಪಿಗಳನ್ನ ಬಂಧಿಸಿದ ಪೊಲೀಸರು ನಿಗೂಢ ಕೊಲೆ ರಹಸ್ಯ ಬಯಲು ಮಾಡಿದ್ದಾರೆ.

ಮಾರ್ಚ್ 9 ರಂದು ಹಿಂದಿ ಶಿಕ್ಷಕಿ ಸುಲೋಚನಾ ಎಂಬುವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ತನಿಖೆ ನಡೆಸಿದ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ರು.ಘಟನೆ ನಡೆದು 6 ತಿಂಗಳಾದ್ರೂ ಆರೋಪಿಗಳನ್ನ ಬಂಧಿಸದ ಪೊಲೀಸರ ಮೇಲೆ ತೀವ್ರ ಒತ್ತಡ ಬಂದಿತ್ತು.ಈ ಹಿನ್ನಲೆ ಎಸ್ಪಿ ಆರ್.ಚೇತನ್,ಎಎಸ್ಪಿ ಡಾ.ಮಾಲಿನಿ ರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗೋವಿಂದರಾಜ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಲಕ್ಷ್ಮೀಕಾಂತ ತಳವಾರ್ ಹಾಗೂ ಸಿಬ್ಬಂದಿಗಳು ತನಿಖೆಯನ್ನ ತೀವ್ರಗೊಳಿಸಿದ್ದರು.ತನಿಖೆ ವೇಳೆ ದೊರೆತ ಸುಳಿವಿನ ಆಧಾರದ ಮೇಲೆ ಕೌನ್ಸಿಲರ್ ಗಾಯಿತ್ರಿ ಮುರುಗೇಶ್ ಹಾಗೂ ಸಂಭಂಧಿಕರನ್ನ ಅರೆಸ್ಟ್ ಮಾಡಿದ್ದಾರೆ.ಬಂಧಿತ ಗಾಯಿತ್ರಿ ಪತಿ ಮುರುಗೇಶ್ ಹಾಗೂ ಶಿಕ್ಷಕಿ ಸುಲೋಚನಾ ನಡುವೆ ಅಕ್ರಮ ಸಂಭಂಧ ಇತ್ತೆಂದು ಹೇಳಲಾಗಿದೆ.ಶ್ರೀಕಂಠೇಶ್ವರನ ದೇವಾಲಯದಲ್ಲಿ ಡಿ.ಗ್ರೂಪ್ ನೌಕರನಾಗಿದ್ದ ಮುರುಗೇಶ್ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ.ಸುಲೋಚನಾ ಜೊತೆ ಅಕ್ರಮ ಸಂಭಂಧ ಇರಿಸಿಕೊಂಡಿದ್ದ.ಈ ವಿಚಾರದಲ್ಲಿ ಮುರುಗೇಶ್ ಮನೆಯಲ್ಲಿ ಸಾಕಷ್ಟು ಬಾರಿ ಗಲಾಟೆ ಆಗಿತ್ತು.ತನ್ನ ಕುಟುಂಬದ ಸಂತೋಷಕ್ಕೆ ಅಡ್ಡಿಯಾದ ಸುಲೋಚನಾಳನ್ನ ಮುಗಿಸಲು ಸ್ಕೆಚ್ ಹಾಕಿದ ಗಾಯಿತ್ರಿ ತನ್ನ ಸಂಭಂಧಿಕರಾದ ಭಾಗ್ಯ,ನಾಗಮ್ಮ ಹಾಗೂ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.ಘಟನೆ ನಡೆದು 6 ತಿಂಗಳ ನಂತರ ಆರೋಪಿಗಳನ್ನ ಸೆರೆ ಹಿಡಿಯುವಲ್ಲಿ ನಂಜನಗೂಡು ಪೊಲೀಸರು ಯಶಸ್ವಿಯಾಗಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *