
KSRP ಎಸ್ಸೈ ಪತ್ನಿ ಆತ್ಮಹತ್ಯೆ…ಬೆನ್ನು ನೋವಿಗೆ ಬೇಸತ್ತು ನೇಣಿಗೆ ಶರಣು…
- CrimeMysore
- August 4, 2022
- No Comment
- 256
KSRP ಎಸ್ಸೈ ಪತ್ನಿ ಆತ್ಮಹತ್ಯೆ…ಬೆನ್ನು ನೋವಿಗೆ ಬೇಸತ್ತು ನೇಣಿಗೆ ಶರಣು…
ಮೈಸೂರು,ಆಗಸ್ಟ್4,Tv10 ಕನ್ನಡ
ಬೆನ್ನು ನೋವಿನಿಂದ ಬಳಲುತ್ತಿದ್ದ KSRP ಎಎಸ್ಸೈ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ ಘಟನೆ ಮೈಸೂರಿನ ಜಾಕಿ ಕ್ವಾರ್ಟರ್ಸ್ ನಲ್ಲಿ ನಡೆದಿದೆ.ಜ್ಯೋತಿ(40) ಮೃತ ದುರ್ದೈವಿ.ಕೆ.ಎಸ್.ಆರ್.ಪಿ.ಯಲ್ಲಿ ಎಎಸ್ಸೈ ಆಗಿರುವ ಮಂಜೇಗೌಡ ರವರ ಪತ್ನಿಯಾಗಿರುವ ಜ್ಯೋತಿ ದಪ್ಪಗಾಗಿದ್ದರು.ದೇಹದ ತೂಕ ಹೆಚ್ಚಾದ ಕಾರಣ ಬೆನ್ನು ನೋವು ಕಾಡುತ್ತಿತ್ತು.ಸಾಕಷ್ಟು ಚಿಕಿತ್ಸೆ ಪಡೆದಿದ್ದರೂ ಬೆನ್ನು ನೋವಿನಿಂದ ಹೊರಬರಲು ಸಾಧ್ಯವಾಗಿರಲಿಲ್ಲ.ಈ ಹಿನ್ನಲೆ ಜೀವನದಲ್ಲಿ ಜಿಗುಪ್ಸೆಗೊಂಡ ಜ್ಯೋತಿ ನೇಣಿಗೆ ಶರಣಾಗಿದ್ದಾರೆ.ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…