• August 12, 2022

ಕಬ್ಬಿನ ದರ ನಿಗದಿಗೆ ವಿರೋಧ…ಸಿಡಿದೆದ್ದ ಅನ್ನದಾತ…ಬೆಂಗಳೂರು-ಮೈಸೂರು ಹೆದ್ದಾರಿ ಬಂದ್…

ಕಬ್ಬಿನ ದರ ನಿಗದಿಗೆ ವಿರೋಧ…ಸಿಡಿದೆದ್ದ ಅನ್ನದಾತ…ಬೆಂಗಳೂರು-ಮೈಸೂರು ಹೆದ್ದಾರಿ ಬಂದ್…

ಕಬ್ಬಿನ ದರ ನಿಗದಿಗೆ ವಿರೋಧ…ಸಿಡಿದೆದ್ದ ಅನ್ನದಾತ…ಬೆಂಗಳೂರು-ಮೈಸೂರು ಹೆದ್ದಾರಿ ಬಂದ್…

ಮೈಸೂರು,ಆಗಸ್ಟ್12,Tv10 ಕನ್ನಡ
ಕಬ್ಬಿನ ಎಫ್ ಆರ್ ಪಿ ದರ ನಿಗದಿ, ವಿದ್ಯುತ್ ಕಾಯ್ದೆ ಖಾಸಗೀಕರಣ ವಿರೋಧಿಸಿ ರೈತರು ಇಂದು ಮೈಸೂರಿನ ಕೊಲಂಬಿಯಾ ಆಸ್ಪತ್ರೆ ವೃತ್ತದಲ್ಲಿ ಒಂದು ಗಂಟೆ ಹೆದ್ದಾರಿ ಬಂದ್ ಮಾಡಿ ಆಕ್ರೋಷ ವ್ಯಕ್ತಪಡಿಸಿದರು.ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರಸ್ತೆ ತಡೆ ಚಳುವಳಿ ನಡೆಯಿತು.ಪರಿಣಾಮ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕಬ್ಬಿಗೆ ಬಳಸುವ ರಸಗೊಬ್ಬರ, ಪೊಟ್ಯಾಶ್ ಚೀಲಕ್ಕೆ ಹೆಚ್ಚುವರಿಯಾಗಿ 900 ರೂ ಡಿಎಪಿ ಬೆಲೆ 350 ಏರಿಕೆಯಾಗಿದೆ ಕಟಾವು ಕೂಲಿ 400 ರೂಪಾಯಿ, ಬೀಜದ ಬೆಲೆ ಎಕರೆಗೆ 500 ಹೆಚ್ಚುವರಿಯಾಗಿ ಎಲ್ಲಾ ಏರಿಕೆಯಾಗಿದೆ, ಆದರೆ ಪ್ರಸಕ್ತ ಸಾಲಿನಲ್ಲಿ ಕೇಂದ್ರ ಸರ್ಕಾರ ಕೇವಲ 150 ರೂ ಏರಿಕೆ ಮಾಡಿ ಟನ್ಗೆ 3050 ನಿಗದಿ ಮಾಡಿದೆ, ಇದು ಕಬ್ಬು ಬೆಳೆಗಾರರಿಗೆ ಮಾಡಿದ ಅನ್ಯಾಯ ಕಬ್ಬು ಬೆಳೆಯುವ ರೈತರು ಈ ದರ ಪುನರ್ ಪರಿಶೀಲನೆ ಮಾಡಬೇಕೆಂದು ಒತ್ತಾಯಿಸಿದರು. ವಿದ್ಯುತ್ ಖಾಸಗೀಕರಣ ದಿಂದ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನಿಲ್ಲುತ್ತದೆ, ಖಾಸಗೀಕರಣ ಕೈಬಿಡಬೇಕು.
ಅತಿವೃಷ್ಟಿ ಮಳೆಹಾನಿ ಬೆಳೆನಷ್ಟ ಪರಿಹಾರ ಕೂಡಲೇ ರೈತರಿಗೆ ತಲುಪಬೇಕು.ಕೂಡಲೇ
ಸರ್ಕಾರ ಎಚ್ಚೆತ್ತುಕೊಂಡು ವಿವಿಧ ಬೇಡಿಕೆ ಈಡೇರಿಸದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ದೆಹಲಿ ಮಾದರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ರಸ್ತೆ ತಡೆ ಪ್ರತಿಭಟನೆಯಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ವರ್ಕೋಡ್ ನಾಗೇಶ್, ಕಾಟೂರು ಮಹದೇವಸ್ವಾಮಿ, ಮಹದೇವ್, ಬಸವರಾಜು, ಮಹದೇವಸ್ವಾಮಿ,
ಶ್ರೀರಾಮ್ ,ರಾಜು, ಭಾಗ್ಯಮ್ಮ, ಸಾಕಮ್ಮ ಶಿವಣ್ಣ ಮಾಲಿಂಗನಾಯಕ್, ಬಸವರಾಜಪ್ಪ, ಮಂಜು ಲಿಂಗಣ್ಣ ನೂರಾರು ಜನರು ಭಾಗವಹಿಸಿದ್ದರು…

Spread the love

Leave a Reply

Your email address will not be published.