• August 13, 2022

ನ್ಯಾಯಾಲಯದ ಆವರಣದಲ್ಲಿ ಪತ್ನಿ ಕತ್ತು ಕೊಯ್ದ ಪತಿ…

ನ್ಯಾಯಾಲಯದ ಆವರಣದಲ್ಲಿ ಪತ್ನಿ ಕತ್ತು ಕೊಯ್ದ ಪತಿ…

ನ್ಯಾಯಾಲಯದ ಆವರಣದಲ್ಲಿ ಪತ್ನಿ ಕತ್ತು ಕೊಯ್ದ ಪತಿ…

ಹಾಸನ,ಆಗಸ್ಟ್13,Tv10 ಕನ್ನಡ
ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಕೊಯ್ದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.ಚೈತ್ರ(32)ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಪತ್ನಿ.
ಆರೋಪಿ ಪತಿ ಶಿವಕುಮಾರ್ ಎಂಬಾರನಿಂದ ಕೃತ್ಯ ನಡೆದಿದೆ.ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ನಿವಾಸಿ ಚೈತ್ರಾ.
ಎರಡನೇ ಜೆಎಂಎಫ್ ಸಿ ಕೋರ್ಟ್ ನ ಶೌಚಾಲಯದ ಬಳಿ ಕತ್ತು ಕೊಯ್ದಿರುವ ಶಿವಕುಮಾರ್.
ಗಂಭೀರವಾಗಿ ಗಾಯಗೊಂಡಿರೋ ಚೈತ್ರಗೆ ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಚ್ಚೇದನಕ್ಕಾಗಿ ಜೋಡಿ ಕೋರ್ಟ್ ಮೆಟ್ಟೆಲೇರಿತ್ತು.
ಕಳೆದ ಎರಡು ವರ್ಷದಿಂದ ಡಿವೋರ್ಸ್ ಗಾಗಿ ನ್ಯಾಯಾಲಯಕ್ಕೆ ಓಡಾಡುತ್ತಿದ್ದರು.
ಹೊಳೆನರಸೀಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

Spread the love

Leave a Reply

Your email address will not be published.