• August 15, 2022

ಆಜಾದಿ ಕಾ ಅಮೃತಹೋತ್ಸವ್ ಹಿನ್ನಲೆ…20 ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ…

ಆಜಾದಿ ಕಾ ಅಮೃತಹೋತ್ಸವ್ ಹಿನ್ನಲೆ…20 ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ…

ಆಜಾದಿ ಕಾ ಅಮೃತಹೋತ್ಸವ್ ಹಿನ್ನಲೆ…20 ಸಜಾ ಬಂಧಿಗಳಿಗೆ ಬಿಡುಗಡೆ ಭಾಗ್ಯ…

ಮೈಸೂರು,ಆ15,Tv10 ಕನ್ನಡ
75ನೇ ಸ್ವಾತಂತ್ರ್ಯ ದಿನಾಚರಣೆಯ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮೈಸೂರಿನ ಕೇಂದ್ರ ಕಾರಾಗೃಹದಿಂದ 20 ಸಜಾ ಬಂಧಿಗಳನ್ನ ಬಿಡುಗಡೆ ಮಾಡಲಾಯಿತು.ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ರಾಜ್ಯ ಸರ್ಕಾರದ ಆದೇಶದ ಮೇಲೆ ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು.ಮೂರು ಹಂತಗಳಲ್ಲಿ ಖೈದಿಗಳನ್ನ ಬಿಡುಗಡೆ ಮಾಡಲಿದ್ದು ಮೊದಲ ಹಂತವಾಗಿ ಅರ್ಹ ಅಲ್ಪಾವಧಿ ಶಿಕ್ಷಾ ಬಂದಿಗಳನ್ನು ವಿಶೇಷ ಮಾಫಿಯೊಂದಿಗೆ ಅವಧಿಪೂರ್ವವಾಗಿ ಬಿಡುಗಡೆಗೊಳಿಸಲಾಯಿತು.ಮಾಫಿ ಸೇರಿ 66% ಶಿಕ್ಷೆ ಪೂರೈಸಿದ 20ಪುರುಷ ಅಲ್ಪಾವಧಿ ಶಿಕ್ಷಾ ಬಂದಿಗಳಾದ ಕುಮಾರ @ಸೀನಾ, ಮಾದೆಯಾಂಡ ಸಿ.ರಾಜೇಶ್, ಶಾಂತರಾಜು, ಕುಮಾರ, ಕೃಷ್ಣ, ಮಾದವನ್, ಜಯರಾಮ, ಮಹೇಶ್, ನಂಜುಂಡ, ಪಿ.ಜಿ.ಪುಟ್ಟ, ವಿ.ಜೆ.ಹರೀಶ್, ಚಂದ್ರೇಗೌಡ, ಮಂಜು, ಶಿವಣ್ಣ, ಜಗದೀಶ್, ಅಬ್ದುಲ್ ಫಾರೂಕ್, ಕೃಷ್ಣ, ಜೇನುಕುರುಬರ ಗಣೇಶ್,ಬೆಟ್ಟಪಟ್ಟಿ, ಆರ್.ಸದಾನಂದ ಬಿಡುಗಡೆಯಾದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಇವರು ಬಿಡುಗಡೆ ಪತ್ರವನ್ನು ವಿತರಿಸಿದರು. ಈ ಸಂದರ್ಭ ಮಾತನಾಡಿ ಮತ್ತೆ ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ಬದುಕು ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು. ಈ ಸಂದರ್ಭ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಕೆ.ಸಿ.ದಿವ್ಯಶ್ರೀ ಉಪಸ್ಥಿತರಿದ್ದರು…

Spread the love

Leave a Reply

Your email address will not be published.