ಸೈಬರ್ ಪೊಲೀಸರ ಕಾರ್ಯಾಚರಣೆ…ಡೆಬಿಟ್ ಕಾರ್ಡ್ ದುರುಪಯೋಗ ಮಾಡಿ 21 ಲಕ್ಷ ವಂಚಿಸಿದ್ದ ಐನಾತಿ ಬಂಧನ…
- CrimeMysore
- August 16, 2022
- No Comment
- 137
ಸೈಬರ್ ಪೊಲೀಸರ ಕಾರ್ಯಾಚರಣೆ…ಡೆಬಿಟ್ ಕಾರ್ಡ್ ದುರುಪಯೋಗ ಮಾಡಿ 21 ಲಕ್ಷ ವಂಚಿಸಿದ್ದ ಐನಾತಿ ಬಂಧನ…
ಮೈಸೂರು,ಆಗಸ್ಟ್16,Tv10 ಕನ್ನಡ
ಸ್ನೇಹಿತನ ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು 21 ಲಕ್ಷ ಲಪಟಾಯಿಸಿದ್ದ ಖದೀಮನನ್ನ ಬಂಧಿಸುವಲ್ಲಿ ಮೈಸೂರು ಸೈಬರ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ ನಗದು ಸೇರಿದಂತೆ 17.41 ಲಕ್ಷ ಮೌಲ್ಯ ಪದಾರ್ಥಗಳನ್ನ ವಶಪಡಿಸಿಕೊಂಡಿದ್ದಾರೆ.2020 ರಲ್ಲಿ ಸುಮಾರು ಒಂದು ತಿಂಗಳ ಕಾಲ ಸಿವಿವಿ ನಂಬರ್ ಪಡೆದು ಚಿನ್ನ,ಟಿವಿ.ಕ್ಯಾಮರಾ ಗಳನ್ನ ಮನಸೋ ಇಚ್ಛೆ ಖರೀದಿಸಿದ ಖದೀಮ ಕೊನೆಗೂ ಸೈಬರ್ ಪೊಲೀಸರ ಜಾಲಕ್ಕೆ ಬಿದ್ದಿದ್ದಾನೆ.20 ಲಕ್ಷ ಮೌಲ್ಯದ ಚಿನ್ನದ ಕಾಯಿನ್ ಗಳನ್ನ ಅಮೆಜಾನ್ ನಲ್ಲಿ ಖರೀದಿಸಿದ್ದಾನೆ.ನಂತರ ಐಶಾರಾಮಿ ಪದಾರ್ಥಗಳನ್ನ ಖರೀದಿಸಿದ್ದಾನೆ.ಈ ಕುರಿತಂತೆ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.ಖದೀಮನ ಬಂಧನಕ್ಕೆ ಡಿಸಿಪಿ ಪ್ರದೀಪ್ ಗುಂಟಿ,ಕೆ.ಆರ್.ವಿಭಾಗದ ಎಸಿಪಿ ಶಶಿಧರ್ ಮಾರ್ಗದರ್ಶನದಲ್ಲಿ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಪಿಎಸ್ಸೈ ಅನಿಲ್ ಕುಮಾರ್,ಸಿದ್ದೇಶ್,ಎಸ್ಸೈ ಸುಭಾಷ್ ಚಂದ್ರ ಹಾಗೂ ಸಿಬ್ಬಂದಿಗಳಾದ ನಾಗೇಂದ್ರ,ಭಾಷಾ ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ 15.05 ಲಕ್ಷ ನಗದು ಹಾಗೂ 2.16 ಲಕ್ಷ ಮೌಲ್ಯದ ಪದಾರ್ಥಗಳನ್ನ ವಶಪಡಿಸಿಕೊಂಡಿದ್ದಾರೆ…