- August 20, 2022
ರೈಸ್ ಮಿಲ್ ಮೇಲೆ ಅಧಿಕಾರಿಗಳ ದಾಳಿ…ಭಾರಿ ಪ್ರಮಾಣದ ಅನ್ನಭಾಗ್ಯ ಅಕ್ಕಿ,ರಾಗಿ ಪತ್ತೆ…

ರೈಸ್ ಮಿಲ್ ಮೇಲೆ ಅಧಿಕಾರಿಗಳ ದಾಳಿ…ಭಾರಿ ಪ್ರಮಾಣದ ಅನ್ನಭಾಗ್ಯ ಅಕ್ಕಿ,ರಾಗಿ ಪತ್ತೆ…
ನಂಜನಗೂಡು,ಆಗಸ್ಟ್20,Tv10 ಕನ್ನಡ
ಫಲಾನುಭವಿಗಳಿಗೆ ಸೇರಬೇಕಾದ ಅನ್ನಭಾಗ್ಯ ಅಕ್ಕಿ ದಂಧೆಕೋರರಿಗೆ ತಲುಪಿದೆ.ಖಾಸಗಿ ರೈಸ್ ಮಿಲ್ ನಲ್ಲಿ ಭಾರಿ ಪ್ರಮಾಣದ ಅನ್ನಭಾಗ್ಯ ಅಕ್ಕಿ ಮತ್ತು ರಾಗಿ ಪತ್ತೆಯಾಗಿದೆ.
ತಹಸೀಲ್ದಾರ್ ಶಿವಮೂರ್ತಿ ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಭಾರಿ ಪ್ರಮಾಣದ ಪಡಿತರ ವಶಪಡಿಸಿಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಕಲ್ಮಳ್ಳಿ ಗ್ರಾಮದಲ್ಲಿರುವ ಶ್ರೀ ಶಂಭುಲಿಂಗೇಶ್ವರ ರೈಸ್ ಮಿಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಂಬೇಡ್ಕರ್ ಸೇನೆ ಸಂಘಟಕರು ನೀಡಿದ ಮಾಹಿತಿ ಹಿನ್ನಲೆ ದಾಳಿ ನಡೆಸಲಾಗಿದೆ.ನಿರಂಜನ್ ಎಂಬುವರಿಗೆ ಸೇರಿದ ಶ್ರೀಶಂಭುಲಿಂಗೇಶ್ವರ ಖಾಸಗಿ ರೈಸ್ ಮಿಲ್. 3ದಿನಗಳ ಹಿಂದೆ ಅಧಿಕಾರಿಗಳು ದಾಳಿ ನಡೆಸಿದ್ದರೂ ಇದುವರೆಗೆ ಸಿಗುತ್ತಿಲ್ಲ ಲೆಕ್ಕ. ಮೂರು ದಿನಗಳಾದರೂ ಶೋಧನೆ ಮುಂದುವರೆಯುತ್ತಲೇ ಇದೆ. ಅಧಿಕಾರಿಗಳಿಗೆ ಆವಾಜ್ ಹಾಕಿ ಶೋಧನೆಯ ಹಾದಿ ದಿಕ್ಕು ತಪ್ಪಿಸುತ್ತಿರುವ ರೈಸ್ಮಿಲ್ ಮಾಲೀಕರು ಹಾಗೂ ಸಂಬಂಧಿಕರು ಯತ್ನಿಸುತ್ತಿದ್ದಾರೆ.
ಪಟ್ಟು ಬಿಡದ ಅಧಿಕಾರಿಗಳ ತಂಡ ಅನ್ನಭಾಗ್ಯ ಅಕ್ಕಿ ಮತ್ತು ರಾಗಿಯನ್ನು ವಶಕ್ಕೆ ಪಡೆದಿದ್ದಾರೆ…