15 ವರ್ಷಗಳಿಂದ ಕಗ್ಗತ್ತಲಲ್ಲಿ ಮುಳುಗಿದ ಬಡಾವಣೆ…ಸಂಪರ್ಕಕ್ಕಾಗಿ ಅಲೆದಾಡುತ್ತಿರುವ ನಿವಾಸಿಗಳು…
- TV10 Kannada Exclusive
- August 20, 2022
- No Comment
- 135
15 ವರ್ಷಗಳಿಂದ ಕಗ್ಗತ್ತಲಲ್ಲಿ ಮುಳುಗಿದ ಬಡಾವಣೆ…ಸಂಪರ್ಕಕ್ಕಾಗಿ ಅಲೆದಾಡುತ್ತಿರುವ ನಿವಾಸಿಗಳು…
ನಂಜನಗೂಡು,ಆಗಸ್ಟ್20,Tv10 ಕನ್ನಡ
ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ ಒದಗಿಸಬೇಕಾದ ಕರ್ತವ್ಯ ಸರ್ಕಾರದ್ದು.ಆದ್ರೆ ಕಳೆದ 15 ವರ್ಷಗಳಿಂದ ವಿದ್ಯುತ್ ಸಂಪರ್ಕವನ್ನೇ ಕಾಣದ ಬಡಾವಣೆಯೊಂದು ಕಗ್ಗಲತ್ತಲಿನಲ್ಲೇ ಮುಳುಗಿದೆ.ವಿದ್ಯುತ್ ಸಂಪರ್ಕಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ ನಿವಾಸಿಗಳು ಬೇಸತ್ತಿದ್ದಾರೆ.ನಂಜನಗೂಡು ತಾಲೂಕಿನ ಹಂಚೀಪುರ ಗ್ರಾಮದ(ದೇವರಾಯ ಶೆಟ್ಟಿಪುರ) ಹೊಸ ಬಡಾವಣೆ ನಿವಾಸಿಗಳು ವಿದ್ಯುತ್ ಗಾಗಿ ಪರಿಪಾಟಲು ಅನುಭವಿಸುತ್ತಿದ್ದಾರೆ.
ಬೆಳಕೇ ಇಲ್ಲದ ಬಡಾವಣೆಯಲ್ಲಿ ಬಡಮಕ್ಕಳ ವಿದ್ಯಾಭ್ಯಾಸ ಮೊಟಕಾಗಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿರುವ ಹಂಚೀಪುರ ಗ್ರಾಮದಲ್ಲಿ ಇಂತಹ ಪರಿಸ್ಥಿತಿ ಉದ್ಭವವಾಗಿದೆ.
ಬಡಾವಣೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದೆ.ಈ ಬಡಾವಣೆಯ ನಿವಾಸಿಗಳು
ಬೀದಿದೀಪ ಒಳಚರಂಡಿ ಮತ್ತು ರಸ್ತೆ ಅಭಿವೃದ್ಧಿಗಾಗಿ ಸಾಕಷ್ಟು ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. 1ತಿಂಗಳ ಹಿಂದೆ ನಂಜನಗೂಡಿನ ತಹಸೀಲ್ದಾರ್ ಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ವಿದ್ಯುತ್ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದರು. ಆದರೆ ಇದುವರೆಗೆ ವಿದ್ಯುತ್ ಸಂಪರ್ಕ ಬಂದಿಲ್ಲ.
ಸ್ಥಳೀಯ ಶಾಸಕರಾಗಿರಲಿ ಮಾಜಿ ಮಂತ್ರಿಯಾಗಿರಲಿ ಬಡಾವಣೆಯ ನಿವಾಸಿಗಳ ಸಮಸ್ಯೆಗೆ ಸ್ಪಂದಿಸಿಲ್ಲ.ಜಿಲ್ಲಾಧಿಕಾರಿಗಳಿಗೂ ಕೂಡ ಸಾಕಷ್ಟು ಮನವಿ ಮಾಡಲಾಗಿದ್ದರೂ ಯಾವುದೇ ಅಧಿಕಾರಿಗಳು ಈ ನೊಂದ ಜನರ ಕಷ್ಟಕ್ಕೆ ಸ್ಪಂದಿಸಿಲ್ಲ.ಕೂಡಲೇ ಬಡಾವಣೆಯ ಸಮಸ್ಯೆ ಸಂಭಂಧಪಟ್ಟ ಅಧಿಕಾರಿಗಳು ಬಗೆಹರಿಸಬೇಕಿದೆ…