
ಮಕ್ಕಳಿಗೆ ಊಟ ತರಲು ಹೊರಟ ತಂದೆ ಮಸಣಕ್ಕೆ…ಡಿವೈಡರ್ ಗೆ ಹೊಡೆದು ಸ್ಪಾಟ್ ಔಟ್…
- CrimeMysore
- August 25, 2022
- No Comment
- 230
ಮಕ್ಕಳಿಗೆ ಊಟ ತರಲು ಹೊರಟ ತಂದೆ ಮಸಣಕ್ಕೆ…ಡಿವೈಡರ್ ಗೆ ಹೊಡೆದು ಸ್ಪಾಟ್ ಔಟ್…
ಮೈಸೂರು,ಆಗಸ್ಟ್ 24,Tv10 ಕನ್ನಡ
ಮಕ್ಕಳಿಗೆ ಊಟ ತರಲು ಕಾರಿನಲ್ಲಿ ಹೊರಟ ತಂದೆ ಡಿವೈಡರ್ ಗೆ ಢಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರಿನ ವೇದಾಂತ ಹೆಮ್ಮಿಗೆ ಸರ್ಕಲ್ ನಲ್ಲಿ ನಡೆದಿದೆ.ಜಯನಗರ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ರವಿಚಂದ್ರ(44) ಮೃತ ದುರ್ದೈವಿ.ನಿನ್ನೆ ರಾತ್ರಿ ಮಕ್ಕಳಿಗೆ ಊಟ ತರಲು ಕಾರಿನಲ್ಲಿ ತೆರಳಿದ್ದಾರೆ.ವಾಪಸ್ ಮನೆಗೆ ಬರುವ ವೇಳೆ ಕಾರಿನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿ ಹೊಡೆದಿದ್ದಾರೆ.ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ರವಿಚಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕೆ.ಆರ್.ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…