ಸಿದ್ದರಾಮಯ್ಯ ಹತ್ಯೆಗೆ 7 ಕಡೆ ಸಂಚು ರೂಪಿಸಲಾಗಿತ್ತು…ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ..
- Politics
- August 25, 2022
- No Comment
- 113
ಸಿದ್ದರಾಮಯ್ಯ ಹತ್ಯೆಗೆ 7 ಕಡೆ ಸಂಚು ರೂಪಿಸಲಾಗಿತ್ತು…ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ..
ಮೈಸೂರು,ಆಗಸ್ಟ್25,Tv10 ಕನ್ನಡ
ಸಿದ್ದರಾಮಯ್ಯ ವಿರುದ್ದ ಪ್ರತಾಪಸಿಂಹ ನಡೆಸಿದ ವಾಗ್ದಾಳಿಗೆ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ವಾರ್ನಿಂಗ್ ನೀಡಿದ್ದಾರೆ.
ಪ್ರಚಾರಕ್ಕಾಗಿ ಪ್ರತಾಪಸಿಂಹ ಈ ರೀತಿ ಮಾಡುತ್ತಿದ್ದಾರೆ.
ಸಿದ್ದರಾಮಯ್ಯ ಪತ್ನಿ ಬಗ್ಗೆ ಪ್ರತಾಪಸಿಂಹ ಮಾತನಾಡುವುದನ್ನು ನಿಲ್ಲಿಸಬೇಕು.
ಪ್ರತಾಪಸಿಂಹಗೆ ಎಚ್ಚರಿಕೆ ನೀಡುತ್ತಿದ್ದೇನೆ.
ಇದೇ ಕೊನೆಯ ವಾರ್ನಿಂಗ್ ಕೊಡುತ್ತಿದ್ದೇವೆ. ಸಿದ್ದರಾಮಯ್ಯ ಬಗ್ಗೆ ಮಾತನಾಡು
ಅವರ ಮನೆಯವರ ಬಗ್ಗೆ ಮಾತನಾಡಬೇಡ.
ಮೈಸೂರು ಕೊಡಗು ಭಾಗಕ್ಕೆ ಅವರ ಕೊಡುಗೆ ಶೂನ್ಯ.
ಕೊಡಗಿನಲ್ಲಿ ಭಾವೈಕ್ಯತೆ ಕದಡುವ ಕೆಲಸ ಮಾಡಿದ್ದಾರೆ.
ಹಿಂದೂ ಮುಸ್ಲಿಂ ಮಾತನಾಡದಂತೆ ಮಾಡಿದ್ದಾರೆ.ಸಿದ್ದರಾಮಯ್ಯ ಹತ್ಯೆಗೆ 7 ಕಡೆ ಸಂಚು ಮಾಡಲಾಗಿತ್ತು.
ಆದರೆ ಅವರ ಪ್ರಯತ್ನವನ್ನು ಗನ್‌ಮ್ಯಾನ್‌ಗಳು ವಿಫಲಗೊಳಿಸಿದರು.
ಆರ್ ಎಸ್ ಎಸ್ ಈ ಬಗ್ಗೆ ಸಂಚು ರೂಪಿಸುತ್ತಲೇ ಇದೆ.
ಈ ಬಗ್ಗೆ ಲಿಖಿತವಾಗಿ ಎಎಸ್‌ಪಿಗೆ ದೂರು ನೀಡಲಾಗಿದೆ.
ಆದರೂ ಇನ್ನು ಎಫ್ ಐ ಆರ್ ದಾಖಲಾಗಿಲ್ಲ.
ಸರ್ಕಾರ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಅನ್ನೋದೆ ಅನುಮಾನವಾಗಿದೆ.
ಭದ್ರತೆ ಹೆಚ್ಚು ಮಾಡಿದರೆ ಪ್ರಯೋಜನವಿಲ್ಲ.
ಹೊಡೆಯುವಾಗ ತಮಾಷೆ ನೋಡುತ್ತಾ ನಿಂತರೆ ಏನು ಪ್ರಯೋಜನ ಎಂದು ವಾಗ್ಧಾಳಿ ನಡೆಸಿದರು…