
ಕುವೆಂಪುನಗರ ಠಾಣೆ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…9.15 ಲಕ್ಷ ಮೌಲ್ಯದ ಚಿನ್ನದ ಸರ ವಶ…
- Crime
- August 25, 2022
- No Comment
- 218
ಕುವೆಂಪುನಗರ ಠಾಣೆ ಪೊಲೀಸರ ಕಾರ್ಯಾಚರಣೆ…ಇಬ್ಬರು ಸರಗಳ್ಳರ ಬಂಧನ…9.15 ಲಕ್ಷ ಮೌಲ್ಯದ ಚಿನ್ನದ ಸರ ವಶ…
ಮೈಸೂರು,ಆಗಸ್ಟ್25,Tv10 ಕನ್ನಡ
ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಬ್ಬರು ಸರಗಳ್ಳರ ಹೆಡೆಮುರಿ ಕಟ್ಟಿದ್ದಾರೆ.ಖದೀಮರಿಂದ 9.15 ಲಕ್ಷ ಮೌಲ್ಯದ 183 ಗ್ರಾಂ ತೂಕದ 5 ಚಿನ್ನದ ಸರಗಳನ್ನ ವಶಪಡಿಸಿಕೊಂಡಿದ್ದಾರೆ.ಹಾಗೂ ಕೃತ್ಯಕ್ಕೆ ಬಳಸಿದ ಒಂದು ಬೈಕ್ ಹಾಗೂ ಎರಡು ಮೊಬೈಲ್ ವಶಪಡಿಸಿಕೊಂಡಿದ್ದಾರೆ.ಆಗಸ್ಟ್ 20 ರಂದು ಸರಗಳವು ಪ್ರಕರಣ ದಾಖಲಾಗುತ್ತಿದ್ದಂತೆಯೇ ಅಲರ್ಟ್ ಆದ ಕುವೆಂಪುನಗರ ಪೊಲೀಸರು ಐನಾತಿ ಸರಗಳ್ಳರ ಬಂಧನಕ್ಕೆ ಜಾಲ ಬೀಸಿದ್ದಾರೆ.
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಗೀತಾ ಎಂ.ಎಸ್ ರವರ ಮಾರ್ಗದರ್ಶನದಲ್ಲಿ,ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಷಣ್ಮುಗವರ್ಮ ರವರ ನೇತೃತ್ವದಲ್ಲಿ ಪಿಎಸ್ಸೈ ಗಳಾದ ರಾಧ.ಎಂ,ಗೋಪಾಲ್ ಎಸ್.ಪಿ.ಎಸ್ಸೈ ಮಹದೇವ್,ಸಿಬ್ಬಂದಿಗಳಾದ ಮಂಜುನಾಥ್,ಪುಟ್ಟಪ್ಪ,ನಾಗೇಶ್,ಹಜರತ್,ಸರ್ಜನ್,ಮಹೇಶ್,ಯೋಗೇಶ್,ಶ್ರೀನಿವಾಸ್,ಮಾದೇಶ್ ರವರನ್ನೊಳಗೊಂಡ ತಂಡ ಖದೀಮರ ಬಂಧನಕ್ಕೆ ಕಾರ್ಯಾಚರಣೆ ನಡೆಸಿ ಯಶಸ್ವಿಗೊಳಿಸಿದೆ.ಕುವೆಂಪುನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ 5 ಸರಗಳವು ಪ್ರಕರಣ ಪತ್ತೆಯಾಗಿದೆ…