
ರಸ್ತೆ ಅಭಿವೃದ್ದಿಯಲ್ಲಿ ಗೋಲ್ ಮಾಲ್…ಮುಡಾ ಅಧಿಕಾರಿಗಳ ವಿರುದ್ದ ದೂರು…
- TV10 Kannada Exclusive
- August 26, 2022
- No Comment
- 274
ರಸ್ತೆ ಅಭಿವೃದ್ದಿಯಲ್ಲಿ ಗೋಲ್ ಮಾಲ್…ಅಧಿಕಾರಿಗಳಿಂದ ಅಧಿಕಾರಿಗಳ ವಿರುದ್ದ ದೂರು…


ಮೈಸೂರು,ಆಗಸ್ಟ್ 26,Tv10 ಕನ್ನಡ
ವಿಜಯನಗರ ಬಡಾವಣೆ ಒಂದನೇ ಹಂತ ವಾಟರ್ ಟ್ಯಾಂಕ್ ಹಾಗೂ ಫ್ರಾಧಿಕಾರದ ಕಲ್ಯಾಣಮಂಟಪ ಮುಂಭಾಗದಿಂದ ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ಮತ್ತು ಕಾಮಗಾರಿಯ ಅನುಮೋದನೆಯ ಸರ್ಕಾರದ ಆದೇಶದ ಆದೇಶದನ್ವಯ ಕಲಂ 25(1) ಮತ್ತು 25 (2) ಅನ್ನು ಅನುಸರಿಸದೇ ಪ್ರಾಧಿಕಾರದ ನಿಧಿಯನ್ನು ಬಳಸಿ ಕಾಮಗಾರಿಗೆ ಹೆಚ್ಚು ವೆಚ್ಛ ಮಾಡಿರುವ ಆರೋಪ ಎದುರಾಗಿದೆ. ಪ್ರಾಧಿಕಾರದ ನಿವೃತ್ತ ನಗರ ಯೋಜನಾ ಸಹಾಯಕ ನಿರ್ದೇರ್ಶಕರು ಮತ್ತು ಪ್ರಾಧಿಕಾರದ ನೌಕರರ ಸಂಘದ ಮಾಜಿ ಅಧ್ಯಕ್ಷರು ಆದ ಪಾ. ಶ್ರೀ. ನಟರಾಜ್‌ರವರು ಸಾರ್ವಜನಿಕ ನಿಧಿಯ ದುರ್ಬಳಕೆ, ಕರ್ತವ್ಯ ಲೋಪದ ಬಗ್ಗೆ ಪ್ರಾಧಿಕಾರದ ಕಾನೂನು ಶಾಖೆಯ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ “ಇಲಾಖಾ ವಿಚಾರಣೆ” ನಡೆಸಬೇಕೆಂದು ಆಗ್ರಹಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳಿಂದ 6.0 ಕೋಟಿಗಳನ್ನು ವಸೂಲಿ ಮಾಡಿ, ಕ್ರಮಿನಲ್ ಮೊಕದ್ದಮೆ ಹೂಡಬೇಕೆಂದು ಅಗ್ರಹಿಸಿದ್ದಾರೆ.4.98 ಕೋಟಿಗೆ ಅನುಮೋದನೆ ನೀಡಲಾಗಿದೆ.ನಿಯಮಗಳನ್ನ ಗಾಳಿಗೆ ತೂರಿ ಹೆಚ್ಚಿನ ಹಣ ವೆಚ್ಚ ಮಾಡಲಾಗಿದೆ ಎಂದು ನಟರಾಜ್ ದೂರಿದ್ದಾರೆ.ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ…





