ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ…
- TV10 Kannada Exclusive
- September 12, 2022
- No Comment
- 196
ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ…
ಮೈಸೂರು,ಸೆ12,Tv10 ಕನ್ನಡ
ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ ನಡೆಸಿದ ಘಟನೆ ಹುಣಸೂರಿನಲ್ಲಿ ನಡೆದಿದೆ. ಲಿಂಗಾಪುರ ಗಿರಿಜನ ಹಾಡಿಯ ರಾಮಚಂದ್ರ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗರಹೊಳೆ ರಾಷ್ಟೀಯ ಉದ್ಯಾನವನದ ಆನೆಚೌಕೂರು ವ್ಯಾಪ್ತಿಯಲ್ಲಿ ಬರುವ ಹಾಡಿಯಲ್ಲಿ ಘಟನೆ ನಡೆದಿದೆ.
ಬೆಳಗ್ಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಏಕೇಕಿ ಕರಡಿ ದಾಳಿ ನಡೆಸಿದೆ.
ಈ ವೇಳೆ ಚೀರಾಡಿದ ಪರಿಣಾಮ ಹಾಡಿಯ ಜನ ಬಂದಿದ್ದಾರೆ.ಈ ವೇಳೆ ಬೆದರಿದ ಕರಡಿ ಕಾಡಿನತ್ತ ಓಡಿಹೋಗಿದೆ.
ಗಾಯಾಳುವಿಗೆ ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ…