ವಾರಸುದಾರರಿಲ್ಲದ ಆಸ್ತಿ ಕಬಳಿಸಲು ಮಾಜಿ MLA ಕುಟುಂಬಸ್ಥರ ಸಂಚು…RTI ಕಾರ್ಯಕರ್ತನಿಂದ ಬಯಲು…ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ತಾಲೂಕು ಆಡಳಿಂತ ಮುಂದು…
- TV10 Kannada Exclusive
- September 13, 2022
- No Comment
- 311
ವಾರಸುದಾರರಿಲ್ಲದ ಆಸ್ತಿ ಕಬಳಿಸಲು ಮಾಜಿ MLA ಕುಟುಂಬಸ್ಥರ ಸಂಚು…RTI ಕಾರ್ಯಕರ್ತನಿಂದ ಬಯಲು…ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ತಾಲೂಕು ಆಡಳಿಂತ ಮುಂದು…
ಮೈಸೂರು,ಸೆ12,Tv10 ಕನ್ನಡ
ವಾರಸುದಾರರಿಲ್ಲದ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನ ಕಬಳಿಸಲು ಮಾಜಿ ದಿವಂಗತ ಎಂಎಲ್ ಎ ಕುಟುಂಬಸ್ಥರು ಸಂಚು ನಡೆಸಿ ಸಿಕ್ಕಿಬಿದ್ದ ಶಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ.RTI ಕಾರ್ಯಕರ್ತ ಬಿ.ಎನ್.ನಾಗ್ಗೇಂದ್ರ ರವರು ಶಾಸಕರ ಕುಟುಂಬಸ್ಥರ ಬಣ್ಣ ಬಯಲು ಮಾಡಿದ್ದಾರೆ.ಅಕ್ರಮದ ಬಗ್ಗೆ ಎಚ್ಚೆತ್ತುಕೊಂಡ ಮೈಸೂರು ತಾಲೂಕು ಆಡಳಿತ ದಾಖಲೆಗಳನ್ನ ಪರಿಶೀಲನೆ ನಡೆಸಿ ಸಿಬ್ಬಂದಿಗಳ ಸಮೇತ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯ ಆಸ್ತಿ ಕಬಳಿಸಲು ಸಂಚು ನಡೆಸಿದ ಕಹಾನಿ ಇದು.ಮೈಸೂರು ತಾಲೂಕು ವರುಣಾ ಹೋಬಳಿ ಲಲಿತಾದ್ರಿಪುರ ಗ್ರಾಮದ ಸರ್ವೆ ನಂ.206 ರ 3.21 ಎಕ್ರೆ ಜಮೀನು ಮೂಲತಃ ಸರ್ಕಾರಿ ಬೀಳು ಆಗಿದೆ.ನಂತರದ ದಿನಗಳಲ್ಲಿ ಸದರಿ ಜಮೀನು ಮೇಲುಕೋಟೆ ವಜ್ರಂಶಿಂಗಯ್ಯಂಗಾರ್ ರವರಿಗೆ RR379 ಮೂಲಕ ಬಂದಿದೆ.ನಂತರ ಇದೀಗ ಮೇಲುಕೋಟೆ ವಜ್ರದ ಅಯ್ಯಂಗಾರ್ ಹೆಸರಲ್ಲಿ RTC ಚಾಲ್ತಿಯಲ್ಲಿದೆ.ಸದರಿ ಜಮೀನನ್ನ ಕಬಳಿಸಲು ಬೆಂಗಳೂರು ನಿವಾಸಿಗಳು ಹಾಗೂ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮಾಜಿ ಶಾಸಕ ದಿ.ಶ್ರೀನಿವಾಸ್ ಅಯ್ಯಂಗಾರ್ ಸೊಸೆ ಲಲಿತಾ ಜಯಗೋಪಾಲ್,ಮೊಮ್ಮಗ ಸುದ್ದೀರ್ ಜಯಗೋಪಾಲ್ ಹಾಗೂ ಮೊಮ್ಮಗಳು ಸುಮನ ಜಯಗೋಪಾಲ್ ರವರು ಸಂಚು ಮಾಡಿದ್ದಾರೆ.ಈ ಮೂವರು ಮೈಸೂರಿನ ನಿವಾಸಿಗಳೆಂದು ಸುಳ್ಳು ವಿಳಾಸ ನೀಡಿ ಸುಳ್ಳು ವಂಶವೃಕ್ಷ ಪಡೆದು ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ.ಈ ಮಾಹಿತಿ ಅರಿತ RTI ಕಾರ್ಯಕರ್ತರಾದ ಬಿ.ಎನ್.ನಾಗೇಂದ್ರ ಸಂಪೂರ್ಣ ದಾಖಲೆ ಸಂಗ್ರಹಿಸಿ ಹಿಂದಿನ ತಹಸೀಲ್ದಾರ್ ಆದ ರಕ್ಷಿತ್ ರವರಿಗೆ ದೂರು ಅರ್ಜಿ ನೀಡಿ ಅಕ್ರಮ ತಡೆಗಟ್ಟಲು ಮುಂದಾಗಿದ್ದಾರೆ.ದಾಖಲೆಗಳನ್ನ ಪರಿಶೀಲಿಸಿದ ತಹಸೀಲ್ದಾರ್ ರಕ್ಷಿತ್ ಆಸ್ತಿ ಉಳಿಸಲು ಕ್ರಮವಹಿಸಿದ್ದಾರೆ.ಹೆಚ್ಚಿನ ವಿಚಾರಣೆ ನಡೆಸಿ ವರದಿ ನೀಡುವಂತೆ ಹೆಚ್ಚುವರಿ ತಹಸೀಲ್ದಾರ್ ವಿಶ್ವನಾಥ್ ರವರಿಗೆ ಸೂಚನೆ ನೀಡಿದ್ದಾರೆ.ದಾಖಲೆಗಳನ್ನ ಕೂಲಂಕುಷವಾಗಿ ಪರಿಶೀಲಿಸಿದ ವಿಶ್ವನಾಥ್ ರವರು ಅಕ್ರಮ ಸಾಬೀತಾಗಿರುವುದನ್ನ ಮನಗಂಡು ಖಾತೆ ಪ್ರಕ್ರಿಯೆಗೆ ಬ್ರೇಕ್ ಹಾಕಿದ್ದಾರೆ.ಅಲ್ಲದೆ ಮಾಜಿ ಶಾಸಕರ ಕುಟುಂಬಸ್ಥರಾದ ಲಲಿತಾ ಜಯಗೋಪಾಲ್,ಸುಮನ ಜಯಗೋಪಾಲ್,ಸುದ್ದೀರ್ ಜಯಗೋಪಾಲ್ ಮತ್ತು ಅಕ್ರಮಕ್ಕೆ ಶಾಮೀಲಾದ ಸಿಬ್ಬಂದಿಗಳು,ಅಧಿಕಾರಿಗಳ ವಿರುದ್ದ ಕ್ರಮಿನಲ್ ಮೊಕದ್ದಮೆ ದಾಖಲಿಸುವಂತೆ ವರುಣಾ ರೆವಿನ್ಯೂ ಇನ್ಸ್ಪೆಕ್ಟರ್ ಗೆ ಸೂಚನೆ ನೀಡಿದ್ದಾರೆ.
ಹೀಗಿದ್ದರೂ ನಕಲಿ ವಂಶವೃಕ್ಷ ಪಡೆದಿದ್ದ ಲಲಿತಾ ಜಯಗೋಪಾಲ್,ಸುಮನ ಜಯಗೋಪಾಲ್,ಸುದ್ದೀರ್ ಜಯಗೋಪಾಲ್ ರವರು ಟಿ.ನರಸೀಪುರದಲ್ಲಿರುವ ಕೋಟ್ಯಾಂತರ ಆಸ್ತಿ ಕಬಳಿಸಿದ್ದಾರೆ.ಟಿ.ನರಸೀಪುರದ ತಿರುಮಕೂಡಲು ಗ್ರಾಮದ ಸರ್ವೆ ನಂ55/2 ರಲ್ಲಿ 22 ಗುಂಟೆ ಹಾಗೂ 55/6 ರಲ್ಲಿ 8 ಗುಂಟೆ ಜಮೀನು ಕಬಳಿಸಿದ್ದಾರೆ.ಸದರಿ ಜಮೀನು ಎಂ.ಆರ್.ರಘುನಾಥರಾವ್,ಎಂ.ಆರ್.ಗೋಪಾಲರಾವ್,ಎಂ.ಆರ್.ನಾಗರಾಜರಾವ್ ಎಂಬುವರಿಗೆ ಸೇರಿದ ಆಸ್ತಿಯನ್ನ ಅಕ್ರಮವಾಗಿ ನಕಲಿ ವಂಶವೃಕ್ಷ ನೀಡಿ ಕಬಳಿಸಿ ಮಾರಾಟ ಮಾಡಿದ್ದಾರೆ.ಸದರಿ ಆಸ್ತಿಗೆ ಖಾತೆ ಮಾಡಿಸಿಕೊಳ್ಳಲು ಮೂವರು ಭೂಮಾಲೀಕರ ಮರಣ ಪ್ರಮಾಣ ಪತ್ರವಾಗಲಿ ಅಥವಾ ಅವರ ವಂಶಸ್ಥರ ವಂಶವೃಕ್ಷವಾಗಲಿ ಇಲ್ಲದಿದ್ದರೂ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ವಂಶವೃಕ್ಷ ರದ್ದುಪಡಿಸುವಂತೆ RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ರವರು ಗ್ರೇಡ್ 2 ತಹಸೀಲ್ದಾರ್ ರೂಪ ರವರಿಗೆ ದೂರು ನೀಡಿದ್ದಾರೆ.ವಿಚಾರಣೆ ನಡೆಸಿದ ರೂಪ ರವರು ವಂಶವೃಕ್ಷ ರದ್ದುಪಡಿಸಿದ್ದಾರೆ.ಸಂಭಂಧಪಟ್ಟ ಯಾವುದೇ ದಾಖಲೆ ಪಡೆಯದೆ ಅಕ್ರಮವಾಗಿ ಖಾತೆ ಮಾಡಿಕೊಟ್ಟವರ ಹಾಗೂ ಬದುಕಿದ್ದವರಿಗೂ ಮರಣ ಪ್ರಮಾಣಪತ್ರ ನೀಡಿದವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರಿನ ಮುಖಾಂತರ ಮನವಿ ಮಾಡಿದ್ದಾರೆ.ಮೈಸೂರು ತಾಲೂಕು ತಹಸೀಲ್ದಾರ್ ಕಚೇರಿಯ ಸಿಬ್ಬಂದಿಗಳು ಹಾಗೂ ಟಿ.ನರಸೀಪುರ ತಾಲೂಕು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ನಾಗೇಂದ್ರ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ರವರು ಮೈಸೂರು ಉಪವಿಭಾಗಾಧಿಕಾರಿಗದ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಜೊತೆಗೆ ಮೈಸೂರು ತಾಲೂಕು ಕಚೇರಿಯಲ್ಲಿ ಬೆಂಗಳೂರು ಮೂಲದ ಭೂಗಳ್ಳರಿಗೆ ನಕಲಿ ವಂಶವೃಕ್ಷ ನೀಡಲು ಸಹಕರಿಸಿದ ಆರ್.ಐ,ಶಿರಸ್ತೇದಾರ್,ಉಪತಹಸೀಲ್ದಾರ್ ಹಾಗೂ ಭೂಮಿ ಶಾಖೆಯಲ್ಲಿ ದಾಖಲೆಗಳು ಇಲ್ಲದಿದ್ದರೂ ಚೆಕ್ ಲಿಸ್ಟ್ ತೆಗೆದವರ ವಿರುದ್ದ KCSR ನಿಯಮಾವಳಿಗಳ ಪ್ರಕಾರ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಮಾನತ್ತಿನಲ್ಲಿಡಬೇಕೆಂದು RTI ಕಾರ್ಯಕರ್ತ ಬಿ.ಎನ್.ನಾಗೇಂದ್ರ ಸರ್ಕಾರವನ್ನ ಆಗ್ರಹಿಸಿದ್ದಾರೆ…