ವಿದ್ಯಾಅರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿ ಆರೋಪ ಸಾಬೀತು…ಆದಿತ್ಯಾ ನರ್ಸಿಂಗ್ ಹೋಂ ನ ಮೂವರು ಸಿಬ್ಬಂದಿಗಳ ಮೇಲೆ ಕ್ರಮ…
- CrimeMysore
- September 15, 2022
- No Comment
- 209
ವಿದ್ಯಾಅರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿ ಆರೋಪ ಸಾಬೀತು…ಆದಿತ್ಯಾ ನರ್ಸಿಂಗ್ ಹೋಂ ನ ಮೂವರು ಸಿಬ್ಬಂದಿಗಳ ಮೇಲೆ ಕ್ರಮ…
ಮೈಸೂರು,ಸೆ15,Tv10 ಕನ್ನಡ
ಅರ್ಹ ವಿದ್ಯಾರ್ಹತೆ ಇಲ್ಲದಿದ್ದರೂ ವೈದ್ಯಕೀಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಮೈಸೂರಿನ ಆದಿತ್ಯಾ ನರ್ಸಿಂಗ್ ಹೋಂ ಮೂವರು ಸಿಬ್ಬಂದಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆಯುಕ್ತರು ಸೂಚನೆ ಹೊರಡಿಸಿದ್ದಾರೆ.ಅರವಳಿಕೆ ತಜ್ಞರಾದ ಡಾ.ಚಂದ್ರಶೇಖರ್,ಶುಶ್ರೋಷಕ ದಿನೇಶ್ ಹಾಗೂ ನಕಲಿ ವೈದ್ಯ ಗಣೇಶ್ ವಿರುದ್ದ KPME ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.ಅರವಳಿಕೆ ತಜ್ಞರಲ್ಲದಿದ್ದರೂ ಡಾ.ಚಂದ್ರಶೇಖರ್ ರೋಗಿಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿರುವುದು ಬೆಳಕಿಗೆ ಬಂದಿದೆ.ಇವರಿಗೆ ವಿದ್ಯಾರ್ಹತೆ ಇಲ್ಲದಿದ್ದರೂ ವೃತ್ತಿಯಲ್ಲಿ ತೊಸಗಿಸಿಕೊಂಡಿರುವುದು ಅಪರಾಧವಾಗುತ್ತದೆ ಆದ್ದರಿಂದ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ವಿಭಾಗೀಯ ನಿರ್ದೇಶಕರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು.ಡಾ.ಚಂದ್ರಶೇಖರ್ ಪ್ರಾಧಿಕಾರಕ್ಕೆ ಮೊರೆ ಹೋಗಿ ಮೇಲ್ಮನವಿ ಸಲ್ಲಿಸಿದ್ದರು.ಪ್ರಾಧಿಕಾರವೂ ಸಹ ವೃತ್ತ ಮುಂದುವರೆಸದಂತೆ ಆದೇಶಿಸಿತ್ತು.ಇದೀಗ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಯುಕ್ತರು ಡಾ.ಚಂದ್ರಶೇಖರ್ ರವರಿಗೆ ವೃತ್ತಿ ಮುಂದುವರೆಸದಂತೆ ಸೂಚನೆ ನೀಡಿದೆ.ಇದರ ಜೊತೆಗೆ ಆದಿತ್ಯ ನರ್ಸಿಂಗ್ ಹೋಂ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಾದ ದಿನೇಶ್ ಹಾಗೂ ಗಣೇಶ್ ಎಂ.ಎಸ್. ರವರಿಗೆ ವಿದ್ಯಾರ್ಹತೆ ಇಲ್ಲವೆಂದು ಸಾಬೀತು ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ…